ಸಮಬಲದ ಚೀಟಿ ಎತ್ತುವಿಕೆಯಲ್ಲಿ ತಳ್ಳು ಗಾಡಿ ವ್ಯಾಪಾರಿಗೆ ಒಲಿದ ಅಧ್ಯಕ್ಷ ಪಟ್ಟ
ಮೈಸೂರು (ಕರಾವಳಿ ಟೈಮ್ಸ್) : ಪ್ರತಿಷ್ಠೆಯ ಕಣವಾಗಿದ್ದ ಮೈಸೂರು ಎಪಿಎಂಸಿಗೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಬಸವರಾಜು ಅದೃಷ್ಟದ ಮೂಲಕ ಅಧ್ಯಕ್ಷರಾಗಿ ಚುನಾಯಿತರಾಗಿದ್ದಾರೆ.
ಶುಕ್ರವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತರಾಗಿ ಬಸವರಾಜು ಹಾಗೂ ಜೆಡಿಎಸ್ ಬೆಂಬಲಿತರಾಗಿ ಕೋಟೆಹುಂಡಿ ಮಹಾದೇವು ಅವರು ಸ್ಪರ್ಧಿಸಿದ್ದರು. ಇಬ್ಬರಿಗೂ ತಲಾ 8 ಮತಗಳು ಲಭ್ಯವಾಗಿ ಫಲಿತಾಂಶ ಸಮಬಲಗೊಂಡಿತು. ಸದಸ್ಯರ ಒಪ್ಪಿಗೆ ಮೇರೆಗೆ ಚುನಾವಣಾಧಿಕಾರಿ, ಮೈಸೂರು ತಾಲೂಕು ತಹಶೀಲ್ದಾರ್ ರಕ್ಷಿತ್ ಅವರು ಲಾಟರಿ ಮೊರೆ ಹೋದರು. ಚೀಟಿ ಎತ್ತುವ ಅದೃಷ್ಟದಾಟದಲ್ಲಿ ಬಸವರಾಜು ಅದೃಷ್ಟ ಖುಲಾಯಿಸುವ ಮೂಲಕ ಅಧ್ಯಕ್ಷರಾಗಿ ಆಯ್ಕೆಯಾದರು.
ಮೈಸೂರು ಎಪಿಎಂಸಿ ಅಧ್ಯಕ್ಷರಾಗಿ ತಳ್ಳುಗಾಡಿ ವ್ಯಾಪಾರಿ ಬಸವರಾಜ ಆಯ್ಕೆಯಾಗಿದ್ದು, ರೈತರ ಮತ್ತು ವ್ಯಾಪಾರಿಗಳ ಹಿತರಕ್ಷಣೆಗೆ ಬದ್ಧವಾಗಿರುವುದಾಗಿ ಹೇಳಿದ್ದಾರೆ.
ದೇವಲಾಪುರ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದ ಬಸವರಾಜು ಅವರು ಉತ್ತಮ ದರ ನಿಗದಿ ಮಾಡುವಂತೆ ಆಗ್ರಹಿಸಿ ರೈತರು ಕೈಗೊಂಡಿದ್ದ ಪ್ರತಿಭಟನೆಯಲ್ಲಿಯೂ ಭಾಗವಹಿಸಿ ಜನಪ್ರಿಯರಾಗಿದ್ದರು.
0 comments:
Post a Comment