ಬಂಟ್ವಾಳ (ಕರಾವಳಿ ಟೈಮ್ಸ್) : ಮಣಿನಾಲ್ಕೂರು ಸೇವಾ ಸಹಕಾರಿ ಬ್ಯಾಂಕ್ ನಿಯಮಿತ ಸರಪಾಡಿ ಇದರ ವತಿಯಿಂದ ಆಶಾ ಕಾರ್ಯಕರ್ತೆಯರಿಗೆ ಗೌರವಧನವನ್ನು ಬಂಟ್ವಾಳ ಶಾಸಕ ಯು ರಾಜೇಶ್ ನಾಯ್ಕ್ ಸಂಸ್ಥೆಯ ಕಚೇರಿಯಲ್ಲಿ ಮಂಗಳವಾರ ವಿತರಿಸಿದರು.
ಈ ಸಂದರ್ಭ ಮಾತನಾಡಿದ ಶಾಸಕ ರಾಜೇಶ್ ನಾಯಕ್, ಆಶಾ ಕಾರ್ಯಕರ್ತೆಯರು ಸೇವೆಯನ್ನು ಗುರುತಿಸಿ ಮಣಿನಾಲ್ಕೂರು ಸೇವಾ ಸಹಕಾರಿ ಬ್ಯಾಂಕ್ ಅವರನ್ನು ಪ್ರೋತ್ಸಾಹಿಸಿ, ಗೌರವಧನ ನೀಡಿರುವುದು ಶ್ಲಾಘನೀಯ. ಕೊರೋನಾ ಮಹಾಮಾರಿಯ ವಿರುದ್ದ ದುಡಿಯುತ್ತಿರುವ ಆಶಾ ಕಾರ್ಯಕರ್ತೆಯರು ತಮ್ಮ ಆರೋಗ್ಯವನ್ನೇ ಲೆಕ್ಕಿಸದೆ ನಮ್ಮೆಲ್ಲರ ಆರೋಗ್ಯದ ಬಗ್ಗೆ ಕಾಳಜಿವಹಿಸುತ್ತಿರುವುದು ಅಭಿನಂದನೀಯ, ಈ ಸಂಸ್ಥೆಯು ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿ ಹೊಂದಿ ಸಮಾಜಮುಖಿ ಕಾರ್ಯವನ್ನು ಮುಂದುವರೆಸುವಂತಾಗಲಿ. ಪ್ರಧಾನಿ ಮೋದಿಯವರ ಇಚ್ಛೆಯಂತೆ ಸರಪಾಡಿ ಗ್ರಾಮವು ಸ್ವಾವಲಂಬಿಯಾಗಲಿ ಎಂದು ಹಾರೈಸಿದರು.
ಈ ಸಂದರ್ಭ ಬ್ಯಾಂಕ್ ಅಧ್ಯಕ್ಷ ಕೆ ರಾಧಾಕೃಷ್ಣ ಮಯ್ಯ, ಉಪಾಧ್ಯಕ್ಷ ವಿಶ್ವನಾಥ ನಾಯ್ಕ ಕಾನೆಕೋಡಿ, ನಿದೇರ್ಶಕರುಗಳಾದ ತಿಲಕ್ ಬಂಗೇರಾ, ದಯಾನಂದ ಶೆಟ್ಟಿ ಮುನ್ನಲಾಯಿ, ಜೋಕಿಂ ಪಿಂಟೋ, ನಿಶಾಂತ್ ಶೆಟ್ಟಿ, ನಾಣ್ಯಪ್ಪ ಪೂಜಾರಿ, ಕೃಷ್ಣ ಶಾಂತಿ, ಪ್ರೇಮ ವಿ ಆಳ್ವಾ, ವಸಂತಿ ಗೌಡ, ಕೆ ಗೋಪಾಲ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ನಿರ್ದೇಶಕ ಧನಂಜಯ ಶೆಟ್ಟಿ ಸ್ವಾಗತಿಸಿ, ಮುಖ್ಯ ಕಾರ್ಯನಿವಾಹಣಾಧಿಕಾರಿ ಎಚ್ ಸುಧಾಕರ ಶೆಟ್ಟಿ ವಂದಿಸಿದರು.
0 comments:
Post a Comment