ಮಂಗಳೂರು (ಕರಾವಳಿ ಟೈಮ್ಸ್) : ಕೆಪಿಸಿಸಿ ನೂತನ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಪದಗ್ರಹಣದ ಪ್ರತಿಜ್ಞಾ ದಿನ ಸಮಾರಂಭ ಕಾರ್ಯಕ್ರಮದ ಪೂರ್ವಭಾವಿ ಸಿದ್ದತಾ ಸಭೆಯು ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಮಿಥುನ್ ರೈ ಹಾಗೂ ಮಂಗಳೂರು ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಬ್ದುಲ್ ರವೂಫ್ ಸಿ.ಎಂ. ಅವರು ನೇತೃತ್ವದಲ್ಲಿ ನಡೆಯಿತು.
ಈ ಸಂದರ್ಭ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಸಮಿತಿಯ ಪದಾಧಿಕಾರಿಗಳಾದ ರಹಿಮಾನ್ ಕೋಡಿಜಾಲ್, ಯೂಸುಫ್ ಬಾವ ಬೆಳ್ಮ, ಕಬೀರ್ ದೇರಳಕಟ್ಟೆ, ಉಳ್ಳಾಲ ಬ್ಲಾಕ್ ಸಮಿತಿಯ ವೀಕ್ಷಕರಾದ ಹಬೀದ್ ಅಲಿ, ಮೀರಜ್ ಪಾಲ್, ರಾಜ್ಯ ಯುವ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಸುಹೈಲ್ ಕಂದಕ್, ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯ ಪದಾಧಿಕಾರಿಗಳಾದ ನಾಸಿರ್ ಸಾಮಾಣಿಗೆ, ಅರುಣ್ ರಾಜ್, ಈಶ್ವರ್ ಉಳ್ಳಾಲ್, ಮಂಗಳೂರು ಯುವ ಕಾಂಗ್ರೆಸ್ ಸಮಿತಿಯ ಪದಾಧಿಕಾರಿಗಳಾದ ಹಾಶೀರ್ ಪೇರಿಮಾರ್, ಅಬು ಶಮೀರ್ ಫಜೀರ್, ರಿಯಾಝ್ ಪಾವೂರ್, ಅರುಣ್ ಕುಮಾರ್ ಕಾಪಿಕಾಡ್, ಅಶ್ರಫ್ ಫಜೀರ್, ಅಬ್ದುಲ್ ಸತ್ತಾರ್ ಬೆಳ್ಮ, ಸವಾದ್ ಸುಳ್ಯ, ಗ್ರಾ.ಪಂ. ಸದಸ್ಯರಾದ ಅಬ್ದುಲ್ ಖಾದರ್ ಮಂಜನಾಡಿ, ಅಬ್ದುಲ್ ರಹಿಮಾನ್ ನರಿಂಗಾನ, ಯುವ ಕಾಂಗ್ರೆಸ್ ಗ್ರಾಮ ಸಮಿತಿಯ ಅಧ್ಯಕ್ಷರುಗಳು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.
0 comments:
Post a Comment