ಬಂಟ್ವಾಳ (ಕರಾವಳಿ ಟೈಮ್ಸ್) : ಕೊರೋನಾ ಸಂಕಷ್ಟದ ಸಮಯದಲ್ಲಿ ವಕೀಲ ಸಮುದಾಯದ ಸಮಸ್ಯೆಗಳಿಗೆ ಸರಕಾರ ಸ್ಪಂದಿಸದ ಬಗ್ಗೆ ದಕ್ಷಿಣ ಕನ್ನಡ ಕಾನೂನು ವೇದಿಕೆ ಬಂಟ್ವಾಳ ಘಟಕದ ವತಿಯಿಂದ ಸೋಮವಾರ ಬಿ ಸಿ ರೋಡು ಮಿನಿ ವಿಧಾನಸೌಧ ಮುಂಭಾಗ ಪ್ರತಿಭಟನೆ ಹಾಗೂ ಸರಕಾರಕ್ಕೆ ವಿವಿಧ ಬೇಡಿಕೆಗಳ ಮನವಿ ಸಲ್ಲಿಸಲಾಯಿತು.
ಸಂಧಿಗ್ಧ ಪರಿಸ್ಥಿತಿಯಲ್ಲಿ ಕರ್ನಾಟಕ ರಾಜ್ಯ ವಕೀಲರ ಪರಿಷತ್ ಆಗಲಿ ಮತ್ತು ಕರ್ನಾಟಕ ರಾಜ್ಯ ಸರಕಾರ ಆಗಲಿ ವಕೀಲರ ಸಮಸ್ಯೆಗಳಿಗೆ ಸಕಾರಾತ್ಮಕವಾಗಿ ಸ್ಪಂದನೆ ನೀಡದಿರುವುದನ್ನು ಖಂಡಿಸಲಾಯಿತು. ರಾಜ್ಯದಲ್ಲಿ ವೃತ್ತಿ ಜೀವನ ನಡೆಸುತ್ತಿರುವ 1 ಲಕ್ಷಕ್ಕಿಂತಲೂ ಹೆಚ್ಚು ವಕೀಲರಿಗೆ ರಾಜ್ಯ ಸರಕಾರ ಬಿಡುಗಡೆಗೊಳಿಸಿರುವ ಕೇವಲ 5 ಕೋಟಿ ರೂಪಾಯಿ ಕಿಂಚಿತ್ತೂ ಸಾಲೋದಿಲ್ಲ. ವಕೀಲ ಸಮುದಾಯಕ್ಕೆ ಕನಿಷ್ಠ 50 ಕೋಟಿ ರೂಪಾಯಿ ಹಣ ಬಿಡುಗಡೆ ಮಾಡಬೇಕು, ವಕೀಲರಿಗೆ ವಿಮಾ ಸೌಲಭ್ಯ ನೀಡಬೇಕು, ಬ್ಯಾಂಕ್‍ಗಳಲ್ಲಿ ವಕೀಲರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಕೊಡಬೇಕು, ಕಿರಿಯ ವಕೀಲರಿಗೆ ಸರಕಾರ ನೀಡುವ ಪೆÇ್ರೀತ್ಸಾಹ ಧನ 6000/- ಕ್ಕೆ ಏರಿಸಬೇಕು ಮತ್ತು ಪೆÇ್ರೀತ್ಸಾಹ ಧನಕ್ಕೆ ಆಯ್ಕೆ ಮಾಡುವಾಗ ಆದಾಯದ ಮಿತಿ ರದ್ದು ಮಾಡಬೇಕು ಮತ್ತು ಇತರ ವಕೀಲರ ಸಮಸ್ಯೆಗಳಿಗೆ ಸರಕಾರ ತಕ್ಷಣ ಸ್ಪಂದನೆ ನೀಡಬೇಕು ಇತ್ಯಾದಿ ಬೇಡಿಕೆಗಳ ಮನವಿಯನ್ನು ರಾಜ್ಯದ ಮುಖ್ಯಮಂತ್ರಿಗಳಿಗೆ ತಹಶೀಲ್ದಾರ್ ಮೂಲಕ ಸಲ್ಲಿಸಲಾಯಿತು.
ದಕ್ಷಿಣಕನ್ನಡ ಜಿಲ್ಲಾ ಕಾನೂನು ವೇದಿಕೆಯ ಜಿಲ್ಲಾಧ್ಯಕ್ಷ ಎಸ್ ಪಿ ಚೆಂಗಪ್ಪ, ಬಂಟ್ವಾಳ ಘಟಕಾಧ್ಯಕ್ಷ ಸುರೇಶ್ ಪೂಜಾರಿ, ಪ್ರದಾನ ಕಾರ್ಯದರ್ಶಿ ರವೀಂದ್ರ ಕುಕ್ಕಾಜೆ, ಜಿಲ್ಲಾ ಮುಖಂಡರಾದ ಉಮೇಶ್ ಕುಮಾರ್ ವೈ, ಕಾರ್ಯದರ್ಶಿಗಳಾದ ಮೋಹನ್ ಕಡೆಶೀವಾಲ್ಯ, ತುಳಸಿದಾಸ್ ವಿಟ್ಲ, ಉಪಾಧ್ಯಕ್ಷ ಮುಹಮ್ಮದ್ ಕಬೀರ್ ಕೆಮ್ಮಾರ, ನ್ಯಾಯವಾದಿಗಳಾದ ಎಚ್ ಸತೀಶ್ ರಾವ್, ಪಿ ಸಿ ಸಾಲ್ಯಾನ್, ಬಿ ವಿ ಶೆಣೈ, ಉಮಾಕರ್ ಬಂಗೇರ, ಮಲಿಕ್ ಅನ್ಸಾರ್ ಕರಾಯ, ಅಬ್ದುಲ್ ಜಲೀಲ್ ಎನ್, ಲಕ್ಷ್ಮಣ, ಕೆ ಬಿ ಮಹಮ್ಮದ್ ಗಝಾಲಿ ಮೊದಲಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
0 comments:
Post a Comment