ಮಂಗಳೂರು (ಕರಾವಳಿ ಟೈಮ್ಸ್) : ಕಳೆದ 21 ದಿನಗಳಿಂದ ನಿರಂತರವಾಗಿ ಪಟ್ರೋಲ್ ಹಾಗೂ ಡೀಸೆಲ್ ಬೆಲೆಗಳನ್ನು ಏರಿಸುತ್ತಿರುವ ಕೇಂದ್ರ ಸರಕಾರದ ವಿರುದ್ಧ ಡಿವೈಎಫ್‍ಐ ಉಳ್ಳಾಲ ವಲಯ ಸಮಿತಿಯ ವತಿಯಿಂದ ಇಂದು ಕುತ್ತಾರ್ ಪೆಟ್ರೋಲ್ ಪಂಪ್ ಮುಂಭಾಗ ಭಿತ್ತಿಪತ್ರ ಪ್ರದರ್ಶಿಸಿ ಪ್ರತಿಭಟನೆ ನಡೆಸಲಾಯಿತು.
ಸಭೆಯನ್ನುದ್ದೇಶಿಸಿ ಡಿವೈಎಫ್‍ಐ ಉಳ್ಳಾಲ ವಲಯ ಸಮಿತಿ ಅಧ್ಯಕ್ಷ ಅಶ್ರಫ್ ಮಂಜ್ರಾಬಾದ್ ಕೆ.ಸಿ.ರೋಡ್, ಜಿಲ್ಲಾ ಮುಖಂಡ ಅಡ್ವಕೇಟ್ ನಿತಿನ್ ಕುತ್ತಾರ್ ಮಾತನಾಡಿದರು.
ಸಭೆಯಲ್ಲಿ ಡಿವೈಎಫ್‍ಐ ಜಿಲ್ಲಾ ನಾಯಕರಾದ ಜೀವನ್‍ರಾಜ್ ಕುತ್ತಾರ್, ರಫೀಕ್ ಹರೇಕಳ, ಸಿಪಿಐಎಂ ಮುಖಂಡರಾದ ಮಹಾಬಲ ದೆಪ್ಪಲಿಮಾರ್, ಜಯರಾಂ ತೇವುಲ, ಚಂದ್ರಹಾಸ್ ಕುತ್ತಾರ್, ಇಬ್ರಾಹಿಂ ಮದಕ, ರೈತ ಸಂಘದ ಶೇಖರ್ ಕುತ್ತಾರ್, ಬರಹಗಾರ ಕೆ.ಆರ್. ನಾಥ್, ಡಿವೈಎಫ್‍ಐ ನಾಯಕರಾದ ಅಶ್ರಫ್ ಹರೇಕಳ, ನವಾಝ್ ಉರುಮಣೆ, ಮಿಥುನ್ ಕುತ್ತಾರ್, ಶಮಾಝ್ ಕೆ.ಸಿ.ರೋಡ್, ಸಮಾಜ ಸೇವಕ ಲತೀಫ್ ಕೈರಳಿ, ಎಸ್.ಎಫ್.ಐ. ಜಿಲ್ಲಾ ಕಾರ್ಯದರ್ಶಿ ವಿಕಾಸ್ ಕುತ್ತಾರ್ ಉಪಸ್ಥಿತರಿದ್ದರು.
ಡಿವೈಎಫ್‍ಐ ಉಳ್ಳಾಲ ವಲಯ ಕಾರ್ಯದರ್ಶಿ ಸುನಿಲ್ ತೇವುಲ ಸ್ವಾಗತಿಸಿ, ಉಪಾಧ್ಯಕ್ಷ ರಝಾಕ್ ಮೊಂಟೆಪದವು ವಂದಿಸಿದರು. ಸಭೆಗೂ ಮುನ್ನ ಕುತ್ತಾರ್ ಜಂಕ್ಷನ್‍ನಿಂದ ಪೆಟ್ರೋಲ್ ಪಂಪ್‍ವರೆಗೆ ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗುತ್ತಾ ಬೈಕುಗಳನ್ನು ತಳ್ಳಿಕೊಂಡು ಬಂದರು.
0 comments:
Post a Comment