ಬಂಟ್ವಾಳ (ಕರಾವಳಿ ಟೈಮ್ಸ್) : ಮಂಚಿ-ಕುಕ್ಕಾಜೆ ಸುನ್ನಿ ಸೆಂಟರ್ ಇದರ ಅದೀನದಲ್ಲಿ ತಾಜುಲ್ ಉಲಮಾ ಎಜುಕೇಶನ್ ಸೆಂಟರ್‍ಗೆ ಶಿಲಾನ್ಯಾಸ ಕಾರ್ಯಕ್ರಮ ಸಯ್ಯಿದ್ ಮುಶ್ತಾಖುರಹ್ಮಾನ್ ತಂಙಳ್ ಚಟ್ಟಕಲ್ ಅವರ ನೇತೃತ್ವದಲ್ಲಿ ನಡೆಯಿತು.
ಎಸ್.ವೈ.ಎಸ್. ಶಾಖಾಧ್ಯಕ್ಷ ಮಹ್ಮೂದ್ ಸಅದಿ ಅಧ್ಯಕ್ಷತೆ ವಹಿಸಿದ್ದರು. ಎಸ್.ಕೆ. ಬದ್ರುದ್ದೀನ್ ಹಾಜಿ ಉದ್ಘಾಟಿಸಿದರು. ಇರಾ ಗ್ರಾಮ ಪಂಚಾಯತ್ ಅಧ್ಯಕ್ಷ ಅಬ್ದುಲ್ ರಝಾಕ್ ಕುಕ್ಕಾಜೆ ಶುಭ ಹಾರೈಸಿ ಮಾತನಾಡಿದರು.
ಗಲ್ಫ್ ಉದ್ಯಮಿ ಅಬ್ಬಾಸ್ ಹಾಜಿ ಕಾಪಿಕಾಡ್, ಕಾಪಿಕಾಡ್ ತಾಜುಲ್ ಉಲಮಾ ಸುನ್ನಿ ಸೆಂಟರ್ ಅಧ್ಯಕ್ಷ ಮುಹಮ್ಮದ್ ಕಾಪಿಕಾಡ್, ಅಬ್ದುಲ್ಲ ಮುಸ್ಲಿಯಾರ್ ನಾಡಾಜೆ, ಅಬ್ಬಾಸ್ ಮುಸ್ಲಿಯಾರ್ ಕಲ್ಲಕಂಡ. ಎಸ್ಸೆಸ್ಸೆಫ್ ಶಾಖಾಧ್ಯಕ್ಷ ಮುಹಮ್ಮದ್ ಶರೀಫ್, ಎಸ್.ವೈ.ಎಸ್. ಕಾರ್ಯದರ್ಶಿ ಮುಹಮ್ಮದ್ ಮುಸ್ಲಿಯಾರ್, ಎಸ್ಸೆಸ್ಸೆಫ್ ಕಾರ್ಯದರ್ಶಿ ಸಫ್ವಾನ್, ಕೋಶಾಧಿರಿ ಬಾತಿಶಾ, ಪ್ರಮುಖರಾದ ಉಸ್ಮಾನ್ ಕುಕ್ಕಾಜೆ, ಅಬ್ದುಲ್ ಸಲಾಂ ಕುಕ್ಕಾಜೆ, ಜಲೀಲ್ ಕಾಪಿಕಾಡ್, ಕೆ.ಎಂ. ಬಶೀರ್ ಅಹ್ಸನಿ ಕುಕ್ಕಾಜೆ, ಸುಲೈಮಾನ್ ಗೇರುಪಡ್ಪು ಮೊದಲಾದವರು ಭಾಗವಹಿಸಿದ್ದರು. ಕೆ.ಎಂ. ಅಬೂಬಕರ್ ಮುಸ್ಲಿಯಾರ್ ಕುಕ್ಕಾಜೆ ಸ್ವಾಗತಿಸಿ, ವಂದಿಸಿದರು.
0 comments:
Post a Comment