ಬಂಟ್ವಾಳ (ಕರಾವಳಿ ಟೈಮ್ಸ್) : ಶಾಸಕ ಯು ರಾಜೇಶ್ ನಾಯ್ಕ್ ಅವರು ಕರಿಯಂಗಳ ಗ್ರಾಮಕ್ಕೆ ಒಟ್ಟು 3.50 ಕೋಟಿಯಷ್ಟು ಅನುದಾನವನ್ನು ನೀಡಿದ್ದು ಇದರಲ್ಲಿ 2 ಕೋಟಿ ರೂಪಾಯಿ ವೆಚ್ಚದ ಕೆಲಸ ನಡೆದಿದ್ದು ಈಗಾಗಲೇ ಉದ್ಫಾಟನೆಗೊಂಡಿದೆ. 1.50 ಕೋಟಿ ರೂಪಾಯಿಯ ಕಾಮಗಾರಿಯನ್ನು ಇಂದು ಉದ್ಫಾಟನೆ ಹಾಗೂ ಅಖಿಲೇಶ್ವರ ದೇವಸ್ಥಾನದ ರಸ್ತೆಗೆ ಗುದ್ದಲಿ ಪೂಜೆ ಮಾಡಲಾಯಿತು.
ಈ ಸಂಧರ್ಭ ದೇವಸ್ಥಾನದ ಆಡಳಿತ ಸಮಿತಿಯ ಸದಸ್ಯರು ಹಾಗೂ ಪೊಳಲಿ ವ್ಯವಸಾಯ ಸೇವಾ ಸಹಕಾರಿಯ ಬ್ಯಾಂಕ್ ಉಪಾಧ್ಯಕ್ಷ ವೆಂಕಟೇಶ್ ನಾವುಡ, ತಾ.ಪಂ ಸದಸ್ಯ ಯಶವಂತ ಪೂಜಾರಿ ಪೊಳಲಿ, ಪಂಚಾಯತ್ ಅಧ್ಯಕ್ಷೆ ಚಂದ್ರಾವತಿ, ಗೋಪಾಲ ಬಂಗೇರ, ತಾಲೂಕು ಭೂ ನ್ಯಾಯ ಮಂಡಳಿಯ ಸದಸ್ಯ ಸುಕೇಶ್ ಚೌಟ, ಪಂಚಾಯತ್ ಸದಸ್ಯ ಲೋಕೇಶ್ ಭರಣಿ, ಕಿಶೋರ್ ಪಲ್ಲಿಪಾಡಿ, ಕುಮಾರ್ ದೇವಾಡಿಗ, ಕಾರ್ತಿಕ್ ಬಳ್ಳಾಲ್ ಅಮ್ಮುಂಜೆ, ಚಂದ್ರಹಾಸ್ ಟೈಲರ್, ರೋಶನ್ ಗರೋಡಿ, ನವೀನ್ ಪೊಳಲಿ ಉಪಸ್ಥಿತರಿದ್ದರು.
ಇಂದು ಉದ್ಫಾಟನೆಗೊಂಡ ಕಾಮಗಾರಿಗಳು
ಪೊಳಲಿ ದ್ವಾರದ ಬಳಿ ಹೈಮಾಸ್ಟ್ ಅಳವಡಿಕೆ - 1.25 ಲಕ್ಷ ರೂಪಾಯಿ ವೆಚ್ಚ
ಪುಂಚಮೆ-ಪಲ್ಲಿಪಾಡಿ ರಸ್ತೆ ಮರುಡಾಮರೀಕರಣ - 86 ಲಕ್ಷ ರೂಪಾಯಿ ವೆಚ್ಚ
ಪೊಳಲಿ ಅಖೀಲೇಶ್ವರ ದೇವಸ್ಥಾನ ರಸ್ತೆ ಅಭಿವೃದ್ಧಿ - 10 ಲಕ್ಷ ರೂಪಾಯಿ ವೆಚ್ಚ
ಕಲ್ಕುಟ ರಸ್ತೆ ಅಭಿವೃದ್ಧಿ - 20 ಲಕ್ಷ ರೂಪಾಯಿ ವೆಚ್ಚ
ಮಯ್ಯರ ಕೂಟೇಲು ಎಂಬಲ್ಲಿ ಫಲ್ಗುಣಿ ನದಿ ದಂಡೆ ಸಂರಕ್ಷಣಾ ಕಾಮಗಾರಿ - 40 ಲಕ್ಷ ರೂಪಾಯಿ ವೆಚ್ಚ
0 comments:
Post a Comment