ಬಂಟ್ವಾಳ (ಕರಾವಳಿ ಟೈಮ್ಸ್) : ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ) ವಿಟ್ಲ ಇದರ ವತಿಯಿಂದ ಝಾನ್ಸಿ ರಾಣಿ ಲಕ್ಷ್ಮೀ ಮಹಿಳಾ ಮಂಡಳಿ (ರಿ) ಕಲ್ಲಡ್ಕ ಇವರ ಸಹಯೋಗದೊಂದಿಗೆ ಜ್ಞಾನವಿಕಾಸ ಸದಸ್ಯರಿಗೆ ಮಾಸ್ಕ್ ವಿತರಣೆ ಹಾಗೂ ಕೋವಿಡ್-19 ಬಗ್ಗೆ ಮಾಹಿತಿ ಕಾರ್ಯಕ್ರಮ ಕಲ್ಲಡ್ಕ ನೇತಾಜಿ ಯುವಕ ಮಂಡಲದಲ್ಲಿ ನಡೆಯಿತು.
ಝಾನ್ಸಿ ರಾಣಿ ಲಕ್ಷ್ಮೀ ಮಹಿಳಾ ಮಂಡಳಿಯ ಅಧ್ಯಕ್ಷೆ ಮೀನಾಕ್ಷಿ ಆರ್. ಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ 50 ಮಂದಿ ಸದಸ್ಯರಿಗೆ ಉಚಿತ ಮಾಸ್ಕ್ ವಿತರಣೆ ಮಾಡಲಾಯಿತು. ವಿಟ್ಲ ಯೋಜನಾ ಕಛೇರಿ ಯೋಜನಾಧಿಕಾರಿ ಮೋಹನ್ ಕೆ. ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಆರೋಗ್ಯ ಇಲಾಖೆ ಸಿಬ್ಬಂದಿ ವೀರೇಶ್ ಕೋವಿಡ್-19 ಹಾಗೂ ಡೆಂಗ್ಯೂ ಜ್ವರದ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಜ್ಞಾನ ವಿಕಾಸ ಸಮನ್ವಯಾಧಿಕಾರಿ ನಳಿನಾಕ್ಷಿ ಶೆಟ್ಟಿ, ಮೇಲ್ವಿಚಾರಕ ಪ್ರೇಮ, ಸೇವಾ ಪ್ರತಿನಿಧಿ ಎವ್ಲೀನ್, ಒಕ್ಕೂಟದ ಉಪಾಧ್ಯಕ್ಷೆ ಅರುಣಾಕ್ಷಿ ಮೊದಲಾದವರು ಭಾಗವಹಿಸಿದ್ದರು.
0 comments:
Post a Comment