ಬೆಂಗಳೂರು (ಕರಾವಳಿ ಟೈಮ್ಸ್) : ರಾಜ್ಯದಲ್ಲಿ ಸೋಮವಾರದಿಂದ ಐದನೇ ಹಂತದ ಲಾಕ್‍ಡೌನ್ ಜಾರಿಯಾಗಿದ್ದು, ರಾತ್ರಿ 9 ಗಂಟೆವರೆಗೆ ಎಲ್ಲಾ ರೀತಿಯ ಕಾರ್ಯ ಚಟುವಟಿಕೆಗಳು ಅಬಾಧಿತವಾಗಿ ನಡೆಯಲಿವೆ. ಇದರ ಭಾಗವಾಗಿ ಕೆ.ಎಸ್.ಆರ್.ಟಿ.ಸಿ. ಬಸ್‍ಗಳು ರಾತ್ರಿ 9 ಗಂಟೆ ತನಕ ಕಾರ್ಯಾಚರಣೆ ಮಾಡಲಿದೆ ಎಂದು ಕೆ.ಎಸ್.ಆರ್.ಟಿ.ಸಿ. ಪ್ರಕಟಣೆ ತಿಳಿಸಿದೆ. ರಾತ್ರಿ 9 ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೆ ಕರ್ಫ್ಯೂ ಜಾರಿಗೊಳಿಸಿದ್ದು, ಈ ಅವಧಿ ಹೊರತುಪಡಿಸಿ ಉಳಿದ ಅವಧಿಯಲ್ಲಿ ಬಸ್‍ಗಳು ಸಂಚರಿಸಲಿವೆ.
ಉಳಿದಂತೆ ಆಟೋ, ಮ್ಯಾಕ್ಸಿ ಕ್ಯಾಬ್, ಅಂಗಡಿ ಮುಂಗಟ್ಟುಗಳು ರಾತ್ರಿ ಗರಿಷ್ಠ 8.30ರವರೆಗೆ ತೆರೆದಿರಲಿವೆ. ಪಾರ್ಸೆಲ್ ನೀಡುವ ಹೋಟೆಲ್‍ಗಳಿಗೂ ಈ ನಿಯಮ ಅನ್ವಯವಾಗಲಿದೆ. ಕೇಂದ್ರ ಹಾಗೂ ರಾಜ್ಯ ಸರಕಾರದ ಲಾಕ್‍ಡೌನ್ 5.0 ಮಾರ್ಗ ಸೂಚಿಯಂತೆ ಕರ್ಪ್ಯೂ ಅವಧಿ ಕಡಿತಗೊಳಿಸಿದ್ದರಿಂದ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಬಸ್‍ಗಳ ಸಂಚಾರದ ಸಮಯದಲ್ಲೂ ಬದಲಾವಣೆಗೊಂಡಿದೆ. ಈ ಕುರಿತಂತೆ ಮಾಹಿತಿ ನೀಡಿರುವ ಕೆ.ಎಸ್.ಆರ್.ಟಿ.ಸಿ., ಇಂದು ರಾತ್ರಿ 9 ಗಂಟೆಯವರೆಗೆ ಬಸ್ಸುಗಳ ಕಾರ್ಯಚರಣೆ ಇರುತ್ತದೆ. ನಾಳೆಯಿಂದ ಬೆಳಗ್ಗೆ 5 ರಿಂದ ರಾತ್ರಿ 9 ಗಂಟೆಯವರೆಗೆ ಬಸ್ಸುಗಳ ಕಾರ್ಯಾಚರಣೆ ಇರುತ್ತದೆ ಎಂದು ಪ್ರಕಟಣೆ ತಿಳಿಸಿದೆ.
0 comments:
Post a Comment