ಮಂಗಳೂರು (ಕರಾವಳಿ ಟೈಮ್ಸ್) : ಅನಿವಾಸಿ ಕನ್ನಡಿಗರ ಸಂಘಟನೆಯಾದ ಕೆಸಿಎಫ್ ರಿಯಾದ್ ಝೋನ್ ವತಿಯಿಂದ ನೀಡಲಾದ ಅಂಬ್ಯುಲೆನ್ಸ್ ಸೇವೆಗೆ ಮಂಗಳೂರು ಶಾಸಕ ಯು ಟಿ ಖಾದರ್ ಕೆ.ಸಿ.ರೋಡಿನಲ್ಲಿ ಚಾಲನೆ ನೀಡಿದರು.
ಕೆಸಿಎಫ್ ಅಂತರಾಷ್ಟ್ರೀಯ ಸಮಿತಿ ಅಧ್ಯಕ್ಷ ಡಾ. ಶೇಕ್ ಬಾವಾ ಹಾಜಿ ಆಂಬ್ಯುಲೆನ್ಸ್ ಕೀಯನ್ನು ಎಸ್ಸೆಸ್ಸೆಫ್ ಉಳ್ಳಾಲ ಡಿವಿಶನ್ ಸಮಿತಿಗೆ ಹಸ್ತಾಂತರಿಸಿದರು. ಇದೇ ವೇಳೆ ಮಾತನಾಡಿದ ಡಾ. ಶೇಕ್ ಬಾವಾ ಹಾಜಿ ಕೆಸಿಎಫ್‍ನ ಮುಂದಿನ ಬ್ರಹತ್ ಯೋಜನೆಯಾದ 35 ಸಾವಿರ ಚದರ ವಿಸ್ತೀರ್ಣದ ಮೂರು ಮಹಡಿಯ ಅಲ್-ಮರ್ಕಝುಲ್ ಇಸ್ಲಾಮೀಯ ಸಂಸ್ಕರಿಕ ಕಟ್ಟಡ ನಿರ್ಮಾಣವಾಗಲಿವೆ. ಸುನ್ನಿ ಸಂಘಟನೆಗಳ ಮುಖ್ಯ ಕಚೇರಿಗಳು ಸಭಾ ಭವನ ಸೇರಿದಂತೆ ಎಸ್ಸೆಸ್ಸೆಫ್ ಸಂಸ್ಥೆಗೆ 575 ಚದರ ವಿಸ್ತೀರ್ಣದ ಹೊಂದಿದ ಕೊಠಡಿಯನ್ನು ಮೀಸಲಿಡಲಾಗಿದೆ ಎಂದರು.
ಎಸ್ಸೆಸ್ಸೆಫ್ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಇಬ್ರಾಹಿಂ ಸಖಾಫಿ ಸೆರ್ಕಳ ಕಾರ್ಯಕ್ರಮ ಉದ್ಘಾಟಿಸಿದರು. ಕೆಸಿಎಫ್ ರಿಯಾದ್ ಝೋನ್‍ನ ನಝೀರ್ ಉಸ್ತಾದ್ ದುವಾ ನೆರವೇರಿಸಿದರು. ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್ ಅಧ್ಯಕ್ಷ ಇರ್ಫಾನ್ ಅಬ್ದುಲ್ಲಾ ನೂರಾನಿ ಅಧ್ಯಕ್ಷತೆ ವಹಿಸಿದ್ದರು. ಕೆಸಿಎಫ್ ಸೌದಿ ಅರೇಬಿಯಾ ರಾಷ್ಟ್ರೀಯ ಸಮಿತಿ ಸಂಘಟನಾ ಕಾರ್ಯದರ್ಶಿ ಬಶೀರ್ ತಲಪಾಡಿ, ಕೆಸಿಎಫ್ ರಿಯಾದ್ ಝೋನ್ ಸಮಿತಿಯ ಯೋಜನೆ ಬಗ್ಗೆ ವಿವರಿಸಿದರು.
ಈ ಸಂದರ್ಭ ಎಸ್ಸೆಸ್ಸೆಫ್ ಜಿಲ್ಲಾ ವೆಸ್ಟ್ ಝೋನ್ ಅಧ್ಯಕ್ಷ ಮುನೀರ್ ಕಾಮಿಲ್ ಸಖಾಫಿ, ಎಸ್ಸೆಸ್ಸೆಫ್ ಜಿಲ್ಲಾ ಕೋಶಾಧಿಕಾರಿ ಮುಹಮ್ಮದ್ ಅಲೀ ತುರ್ಕಳಿಕೆ, ಕೆಸಿಎಫ್ ರಿಯಾದ್ ಝೋನ್ ಪಬ್ಲಿಕೇಶನ್ ಕಾರ್ಯದರ್ಶಿ ಹನೀಫ್ ಕಣ್ಣೂರು, ಕೆಸಿಎಫ್ ರಿಯಾದ್ ಝೋನ್ ಸದಸ್ಯರಾದ ಅಶ್ರಫ್ ಮದನಿ, ಅಶ್ರಫ್ ಕೆಎಂಎಸ್, ಅಮಾನಿ ಉಸ್ತಾದ್, ಎಸ್ಸೆಸ್ಸೆಫ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರೀಫ್ ನಂದಾವರ, ಕಾರ್ಯದರ್ಶಿ ರಶೀದ್ ಹಾಜಿ ವಗ್ಗ, ಕ್ಯಾಂಪಸ್ ಕಾರ್ಯದರ್ಶಿ ಶರೀಫ್ ಬೇರ್ಕಲ, ಸದಸ್ಯರಾದ ಸಯ್ಯಿದ್ ಖುಬೈಬ್ ತಂಙಳ್, ಇಕ್ಬಾಲ್ ಮಾಚಾರ್, ಹಕೀಂ ಕಳಂಜಿಬೈಲು, ಉಸ್ಮಾನ್ ಕೆ.ಸಿ.ರೋಡು, ಸಲಹಾ ಸಮಿತಿ ಸದಸ್ಯ ಕುಂಞÂ ಮೊನು, ಜಿಲ್ಲಾ ವೆಸ್ಟ್ ಝೋನ್ ಪ್ರಧಾನ ಕಾರ್ಯದರ್ಶಿ ಹೈದರ್ ಕಾಟಿಪಳ್ಳ, ಉಳ್ಳಾಲ ಡಿವಿಶನ್ ಉಸ್ತುವಾರಿ ಮನ್ಸೂರ್ ಬಜಾಜ್, ಎಸ್.ವೈ.ಎಸ್. ಕೆ.ಸಿ.ರೋಡ್ ಸೆಂಟರ್ ಅಧ್ಯಕ್ಷ ಯುಬಿಎಂ ಹಾಜಿ, ಅಲ್ ಮುಬಾರಕ್ ಜುಮಾ ಮಸೀದಿ ಅಧ್ಯಕ್ಷ ಫಾರೂಕ್ ಅಬ್ಬಾಸ್ ಉಳ್ಳಾಲ, ಸಲೀಂ ಕನ್ಯಾಡಿ, ಎಸ್.ವೈ.ಎಸ್. ಕೆ.ಸಿ.ರೋಡ್ ಸೆಂಟರ್ ಕಾರ್ಯದರ್ಶಿ ಕೆ.ಎಂ. ಫಾರೂಕ್ ಬಟ್ಟಪಾಡಿ, ಎಸ್ಸೆಸ್ಸೆಫ್ ಉಳ್ಳಾಲ ಡಿವಿಶನ್ ಮಾಜಿ ಪ್ರಧಾನ ಕಾರ್ಯದರ್ಶಿ ಹಮೀದ್ ತಲಪಾಡಿ ಮೊದಲಾದವರು ಭಾಗವಹಿಸಿದ್ದರು. ಎಸ್ಸೆಸ್ಸೆಫ್ ಉಳ್ಳಾಲ ಡಿವಿಶನ್ ಪ್ರಧಾನ ಕಾರ್ಯದರ್ಶಿ ಜಾಫರ್ ಯು.ಎಸ್. ಕಾರ್ಯಕ್ರಮ ನಿರೂಪಿಸಿದರು.
0 comments:
Post a Comment