ಬಂಟ್ವಾಳ (ಕರಾವಳಿ ಟೈಮ್ಸ್) : ಅಕ್ರಮ ಜಾನುವಾರು ಸಾಗಾಟ ನಡೆಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಬಂಟ್ವಾಳ ಗ್ರಾಮಾಂತರ ಎಸ್ಸೈ ಪ್ರಸನ್ನ ನೇತೃತ್ವದ ಪೊಲೀಸರು ತಾಲೂಕಿನ ಸರಪಾಡಿಯಲ್ಲಿ ಬೇಧಿಸಿ ಪಿಕಪ್ ಚಾಲಕನ ಮುಹಮ್ಮದ್ ಹನೀಫ್ ಎಂಬಾತನನ್ನು ಬಂಧಿಸಿದ್ದಾರೆ.
ಮಂಗಳೂರು ತಾಲೂಕು, ಕಣ್ಣೂರು-ಬಿರ್ಪುಗುಡ್ಡೆ ನಿವಾಸಿ ಇಬ್ರಾಹಿಂ ಎಂಬವರು ಕೊಟ್ಟುಂಜ ಬಾಲಕೃಷ್ಣ ಪೂಜಾರಿ ಅವರಿಂದ ಜಾನುವಾರುಗಳನ್ನು ಖರೀದಿಸಿ ಮುಹಮ್ಮದ್ ಹನೀಫ್ ಅವರ ಪಿಕಪ್ ವಾಹನದಲ್ಲಿ ಪರವಾನಿಗೆ ರಹಿತವಾಗಿ ಸಾಗಿಸುತ್ತಿದ್ದರು ಎನ್ನಲಾಗಿದೆ. ಈ ವೇಳೆ ಪೆÇಲೀಸರು ದಾಳಿ ನಡೆಸಿ ಆರೋಪಿಯನ್ನು ದಸ್ತಗಿರಿ ಮಾಡಿದ್ದಾರೆ.
ದಾಳಿ ವೇಳೆ ಪೊಲೀಸರು 10,500 ರೂಪಾಯಿ ಮೌಲ್ಯದ ಒಂದು ದನ, ಹೋರಿ, ಗಂಡು ಕರು ಹಾಗೂ ಒಂದು ಹೆಣ್ಣು ಕರು ಸಹಿತ 2 ಲಕ್ಷ ಮೌಲ್ಯದ ಪಿಕಪ್ ವಾಹನವನ್ನು ವಶಪಡಿಸಿಕೊಂಡಿದ್ದಾರೆ.
0 comments:
Post a Comment