ಬಂಟ್ವಾಳ (ಕರಾವಳಿ ಟೈಮ್ಸ್) : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಟ್ರಸ್ಟ್ ವಿಟ್ಲ-ಮುಡಿಪು ವಲಯದ ಇರಾ ಕಂಚಿನಡ್ಕಪದವು ಸಿಂದೂರ ಜ್ಞಾನ ವಿಕಾಸ ಸಂಘಟನೆಯ ಸದಸ್ಯರಿಗೆ ಕಂಚಿನಡ್ಕಪದವು ಅಂಬೇಡ್ಕರ್ ಭವನದಲ್ಲಿ ಕೋವಿಡ್-19 ವೈರಸ್ ತಡೆಗಟ್ಟುವಿಕೆ ಬಗ್ಗೆ ಮಾಹಿತಿ ಶಿಬಿರ ಕಾರ್ಯಕ್ರಮ ಒಕ್ಕೂಟದ ಅಧ್ಯಕ್ಷ ಜಯಪ್ರಕಾಶ್ ಕಾಜವ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಇರಾ ಗ್ರಾಮ ಪಂಚಾಯತ್ ಅಧ್ಯಕ್ಷ ಅಬ್ದುಲ್ ರಝಾಕ್ ಕುಕ್ಕಾಜೆ ಮಾತನಾಡಿ ಗ್ರಾಮ ಪಂಚಾಯತ್ ಮೂಲಕ ಸದಸ್ಯರಿಗೆ ಮಾಸ್ಕ್ ವಿತರಿಸಿ ಕೊರೋನಾ ಸಂಕಷ್ಟ ಪೀಡಿತ ಗ್ರಾಮಸ್ಥರಿಗೆ ಈಗಾಗಲೇ ಸಂಘ-ಸಂಸ್ಥೆಗಳ ಮೂಲಕ ಹಾಗೂ ದಾನಿಗಳ ನೆರವಿನ ಮೂಲಕ ಗ್ರಾಮ ಪಂಚಾಯತ್ ಸ್ಪಂದಿಸಿದ್ದು, ರೋಗದ ಮುನ್ನೆಚ್ಚರಿಕೆಯನ್ನು ಮೈಗೂಡಿಸಿಕೊಂಡು ಮುಂದಿನ ದಿನಗಳಲ್ಲಿಯೂ ಕೊರೋನಾ ಸಂಪೂರ್ಣ ನಿರ್ಮೂಲನೆಗಾಗಿ ಸಹಕರಿಸುವಂತೆ ಕೋರಿದರು.
ದೇರಳಕಟ್ಟೆ ಕೆ.ಎಸ್. ಹೆಗ್ಡೆ ಆಸ್ಪತ್ರೆಯ ಆರೋಗ್ಯ ಸಹಾಯಕಿ ಜಯಂತಿ ಹಾಗೂ ಜ್ಞಾನ ವಿಕಾಸ ಸಮನ್ವಯಾಧಿಕಾರಿ ನಳಿನಾಕ್ಷಿ ಶೆಟ್ಟಿ ಕೊರೊನ ರೋಗದ ತಡೆಗಟ್ಟುವಿಕೆಯ ಬಗ್ಗೆ ಮಾಹಿತಿ ನೀಡಿದರು. ಇರಾ ಒಕ್ಕೂಟದ ಅಧ್ಯಕ್ಷ ಭಾಸ್ಕರ ಕುಂಡಾವು ಉಪಸ್ಥಿತರಿದ್ದರು. ಸೇವಾ ಪ್ರತಿನಿಧಿ ಕವಿತ ಕಾರ್ಯಕ್ರಮ ನಿರೂಪಿಸಿದರು.
0 comments:
Post a Comment