ಬಂಟ್ವಾಳ (ಕರಾವಳಿ ಟೈಮ್ಸ್) : ಹ್ಯುಮಾನಿಟಿ ಕ್ಲಬ್ ಬಂಟ್ವಾಳ ಇವರ ಮುತುವರ್ಜಿಯಿಂದ ಬಿ ಸಿ ರೋಡು ಶ್ರೀನಿವಾಸ್ ಆರ್ಕೆಡ್ ಮುಂಭಾಗದ ಬಸ್ಸು ನಿಲ್ದಾಣದಲ್ಲಿ ಕಳೆದ ಹಲವು ಸಮಯಗಳಿಂದ ಬೀಡು ಬಿಟ್ಟು ವಾಸವಾಗಿದ್ದ ದಂಪತಿಯನ್ನು ಮನವೊಲಿಸಿ ಊರಿಗೆ ಕಳುಹಿಸಿಕೊಡಲಾಗಿದೆ.
ಸ್ಥಳೀಯ ಸಾಮಾಜಿಕ ಕಾರ್ಯಕರ್ತ ರಾಜ ಚೆಂಡ್ತಿಮಾರ್ ಅವರು ಬಿ ಸಿ ರೋಡು ಬಸ್ಸು ನಿಲ್ದಾಣದಲ್ಲಿ ಬೀಡು ಬಿಟ್ಟಿದ್ದ ಮೈಸೂರು ಮೂಲದ ದಂಪತಿ ನಾಗರಾಜ ಮತ್ತು ಶಾಂತಮ್ಮ ಅವರ ಬಗ್ಗೆ ಬಂಟ್ವಾಳ ಹ್ಯುಮಾನಿಟಿ ಕ್ಲಬ್ ಸಂಘಟಕ ಪ್ರಶಾಂತ್ ಫ್ರಾಂಕ್ ಅವರ ಗಮನ ಸೆಳೆದಿದ್ದರು. ತಕ್ಷಣ ಕಾರ್ಯಪ್ರವೃತ್ತರಾದ ಅವರು ದಂಪತಿಗಳ ಮನವೊಲಿಸಿ ಬಂಟ್ವಾಳ ನಗರ ಠಾಣಾ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ಬಸ್ಸು ಮೂಲಕ ಊರಿಗೆ ಕಳುಹಿಸುವಲ್ಲಿ ಸಫಲರಾಗಿದ್ದಾರೆ.
0 comments:
Post a Comment