ವಾಹನ ಸವಾರರ ದಾಖಲೆಗಳ ಮಾನ್ಯತಾ ಅವಧಿ ಮತ್ತೊಮ್ಮೆ ವಿಸ್ತರಿಸಿದ ಕೇಂದ್ರ ಸರಕಾರ - Karavali Times ವಾಹನ ಸವಾರರ ದಾಖಲೆಗಳ ಮಾನ್ಯತಾ ಅವಧಿ ಮತ್ತೊಮ್ಮೆ ವಿಸ್ತರಿಸಿದ ಕೇಂದ್ರ ಸರಕಾರ - Karavali Times

728x90

9 June 2020

ವಾಹನ ಸವಾರರ ದಾಖಲೆಗಳ ಮಾನ್ಯತಾ ಅವಧಿ ಮತ್ತೊಮ್ಮೆ ವಿಸ್ತರಿಸಿದ ಕೇಂದ್ರ ಸರಕಾರ



ನವದೆಹಲಿ (ಕರಾವಳಿ ಟೈಮ್ಸ್) : ವಾಹನ ಚಾಲಕರಿಗೆ ಕೇಂದ್ರ ಸರಕಾರ ಮತ್ತೊಮ್ಮೆ ದಿನಾಂಕ ವಿಸ್ತರಿಸಿ ಅವಕಾಶ ನೀಡಿದೆ. ಕೊರೋನಾ ಲಾಕ್‍ಡೌನ್ ಕಾರಣದಿಂದ ಚಾಲನಾ ಪರವಾನಗಿ, ಪರ್ಮಿಟ್ ಅವಧಿ ಮುಗಿದು ನವೀಕರಣಗೊಳಿಸಲಾಗದೆ ಇದ್ದವರಿಗೆ ಅವುಗಳ ಮಾನ್ಯತಾ ಅವಧಿಯನ್ನು ಈ ವರ್ಷದ ಸೆಪ್ಟಂಬರ್‍ವರೆಗೆ ವಿಸ್ತರಿಸಿರುವುದಾಗಿ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಮಂಗಳವಾರ ತಿಳಿಸಿದ್ದಾರೆ.

ಈ ಕುರಿತು ಎಲ್ಲ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಿಗೆ ಮಾಹಿತಿ ನೀಡಿದ್ದಾರೆ. ಫಿಟ್‍ನೆಸ್, ಪರ್ಮಿಟ್ (ಎಲ್ಲ ರೀತಿಯ) ಚಾಲನಾ ಪರವಾನಿಗೆ, ನೋಂದಣಿ ಅವಧಿ ಮುಗಿದಿದ್ದು, ಲಾಕ್‍ಡೌನ್ ಕಾರಣದಿಂದ ನವೀಕರಣ ಮಾಡಿಸಿಕೊಳ್ಳದಿದ್ದರೂ ಅವುಗಳ ಮಾನ್ಯತೆಯನ್ನು ಎರಡನೇ ಬಾರಿಗೆ ಕೇಂದ್ರ ಸರಕಾರ ವಿಸ್ತರಿಸಿ ಆದೇಶಿಸಿದೆ. ಈ ಮೊದಲು ಮಾರ್ಚ್ 30 ರಂದು ಸರಕಾರ ಆದೇಶ ನೀಡಿ ಜೂನ್ 30ವರೆಗೆ ವಿಸ್ತರಿಸಿತ್ತು. 
  • Blogger Comments
  • Facebook Comments

0 comments:

Post a Comment

Item Reviewed: ವಾಹನ ಸವಾರರ ದಾಖಲೆಗಳ ಮಾನ್ಯತಾ ಅವಧಿ ಮತ್ತೊಮ್ಮೆ ವಿಸ್ತರಿಸಿದ ಕೇಂದ್ರ ಸರಕಾರ Rating: 5 Reviewed By: karavali Times
Scroll to Top