ಜೈಪುರ (ಕರಾವಳಿ ಟೈಮ್ಸ್) : ಅಜ್ಮೀರ್ ಶರೀಫಿನಲ್ಲಿ ಅಂತ್ಯ ವಿಶ್ರಮ ಹೊಂದುತ್ತಿರುವ ಸೂಫಿ ಸಂತ ಹಝ್ರತ್ ಖ್ವಾಜಾ ಮೊಯಿನುದ್ದೀನ್ ಚಿಶ್ತಿ (ರ) ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಕ್ಕಾಗಿ ಕಿರುತೆರೆ ಸುದ್ದಿ ನಿರೂಪಕರೊಬ್ಬರ ವಿರುದ್ಧ ಪೆÇಲೀಸರು ಎಫ್‍ಐಆರ್ ದಾಖಲಿಸಿದ್ದಾರೆ.
ನ್ಯೂಸ್ 18 ಇಂಡಿಯಾ ಆಂಕರ್ ಅಮಿಶ್ ದೇವಗನ್ ವಿರುದ್ಧ ಮಂಗಳವಾರ ರಾತ್ರಿ ಅಜ್ಮೀರ್ ಸಂತ ಖ್ವಾಜಾ ಮೊಯಿನುದ್ದೀನ್ ಚಿಶ್ತಿ ದರ್ಗಾ ಖಾದಿಮ್ ಅವರು ದೂರು ನೀಡಿದ್ದು, ಆ ಪ್ರಕಾರ ಅವರ ವಿರುದ್ದ ಎಫ್‍ಐಆರ್ ದಾಖಲಾಗಿದೆ.
ಅಮಿಶ್ ಮುಸ್ಲಿಂ ಸಮುದಾಯದ ವಿರುದ್ಧ ಕೋಮುವಾದಿ ಕಾರ್ಯಸೂಚಿ ಹೊಂದಿದ್ದಾರೆ.ಸೂಫಿ ಸಂತರ ದರ್ಗಾಗೆ ಮುಸ್ಲಿಮರು ಮಾತ್ರವಲ್ಲದೆ ಎಲ್ಲಾ ಧರ್ಮದ ಜನರು ಭೇಟಿ ನೀಡುತ್ತಾರೆ ಮತ್ತು ಅವರ ಅಭಿಪ್ರಾಯಗಳು ಎಲ್ಲರ ಭಾವನೆಗಳನ್ನು ಘಾಸಿಗೊಳಿಸಿದೆ ಎಂದು ಸೈಯದ್ ಸರ್ವಾರ್ ಚಿಶ್ತಿ ಹೇಳಿದ್ದಾರೆ.
ಧಾರ್ಮಿಕ ಭಾವನೆಗಳನ್ನು ಘಾಸಿ ಮಾಡಿದ ಕಾರಣಕ್ಕಾಗಿ ಭಾರತೀಯ ದಂಡ ಸಂಹಿತೆ ಮತ್ತು ಐಟಿ ಕಾಯ್ದೆಯ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ದರ್ಗಾ ಎಸ್‍ಎಚ್‍ಒ ಹೇಮ್‍ರಾಜ್ ಹೇಳಿದ್ದಾರೆ.
ಇದೇ ವೇಳೆ ನಿರೂಪಕ ತಮ್ಮ ಟ್ವೀಟ್ ಖಾತೆಯಲ್ಲಿ ಕ್ಷಮೆ ಯಾಚಿಸಿದ್ದಾರೆ. “ನನ್ನ ಚರ್ಚೆಯೊಂದರಲ್ಲಿ, ನಾನು ಅಜಾಗರೂಕತೆಯಿಂದ ‘ಖಿಲ್ಜಿ’ ಯನ್ನು ಚಿಶ್ತಿ ಎಂದು ಉಲ್ಲೇಖಿಸಿದೆ. ಈ ಅಜಾಗರೂಕತೆಯ ದೋಷಕ್ಕಾಗಿ ನಾನು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ ಮತ್ತು ನಾನು ಅವರನ್ನು ಪೂಜಿಸುವ ಸೂಫಿ ಸಂತ ಮೊಯಿನುದ್ದೀನ್ ಚಿಶ್ತಿಯ ಅನುಯಾಯಿಗಳಿಗೆ ಉಂಟಾದ ನೋವು, ದುಃಖಕ್ಕೆ ವಿಷಾದಿಸುತ್ತೇನೆ. ಈ ಹಿಂದೆ ನಾನು ಸಹ ದರ್ಗಾಗೆ ತೆರಳಿ ಅವರ ಆಶೀರ್ವಾದ ಪಡೆದಿದ್ದೆ” ಅವರು ಹೇಳಿದ್ದಾರೆ.
0 comments:
Post a Comment