ಮಂಗಳೂರು (ಕರಾವಳಿ ಟೈಮ್ಸ್) : ದ.ಕ. ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಣ್ಣ ಮತ್ತು ಮಧ್ಯಮ ಪತ್ರಿಕೆಗಳಾದ ಸಾಪ್ತಾಹಿಕ, ಮಾಸಪತ್ರಿಕೆ, ದ್ವೈಮಾಸಿಕ, ತ್ರೈಮಾಸಿಕ ಪತ್ರಿಕೆ ಒಟ್ಟು ಸೇರಬೇಕಾದ ಅನಿವಾರ್ಯತೆ ಉಂಟಾಗಿದೆ. ಪ್ರಸಕ್ತ ಈ ಪತ್ರಿಕೆಗಳ ಸಂಪಾದಕರುಗಳು ಪತ್ರಿಕೆ ನಡೆಸಲು ಪಡುವ ಪಾಡು ಬಹಳಷ್ಟು. ಅಲ್ಲದೆ ನಾಡಿನ ಭವಿಷ್ಯತ್ ಸಾಮಾಜಿಕ ಕಳಕಳಿ ಹಾಗೂ ಜಾಗೃತಿಯನ್ನು ಮೂಡಿಸುತ್ತಿರುವ ಈ ಪತ್ರಿಕೆಗಳ ಸಂಪಾದಕರುಗಳಿಗೆ ಸರಕಾರದ ಯಾವುದೇ ಸೌಲಭ್ಯಗಳು ಸಿಗದೆ ವಂಚಿತರಾಗುತ್ತಿದ್ದಾರೆ.
ಈ ಬಗ್ಗೆ ಧ್ವನಿ ಎತ್ತುವರೇ ಸಂಪಾದಕರುಗಳ ಜಿಲ್ಲಾ ಒಕ್ಕೂಟ ರಚನೆ ಮಾಡಿ ಮಾಧ್ಯಮಕ್ಕೆ ಸರಕಾರದಿಂದ ನೀಡಲ್ಪಡುವ ಸಹಕಾರ ಹಾಗೂ ಪೆÇ್ರೀತ್ಸಾಹವನ್ನು ಪಡೆಯಲು ಶ್ರಮಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ನಾಡಿನ ಭವಿಷ್ಯತ್, ಸಾಮಾಜಿಕ ಕಳಕಳಿ ಜಾಗೃತಿ ಮೂಡಿಸುವ ಸದುದ್ದೇಶದೊಂದಿಗೆ ಕಾರ್ಯಾಚರಿಸುವ ಪತ್ರಿಕೆಗಳ ಸಂಪಾದಕರು ತಮ್ಮ ವಿಳಾಸವನ್ನು poovaritulumagazine@gmail.com ವಿಳಾಸಕ್ಕೆ ಕಳುಹಿಸಿ ಕೊಡಬಹುದು. ಈ ಬಗ್ಗೆ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9448177400 ಅಥವಾ 9901726144ನ್ನು ಸಂಪರ್ಕಿಸಬಹುದು ಎಂದು ವಿಜಯ್‍ಕುಮಾರ್ ಹೆಬ್ಬಾರಬೈಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
0 comments:
Post a Comment