ಸಚಿವ ಡಾ. ಸುಧಾಕರ್ ಅವರ ಪತ್ನಿ, ಮಗಳಿಗೂ ಕೊರೋನಾ ಪಾಸಿಟಿವ್ - Karavali Times ಸಚಿವ ಡಾ. ಸುಧಾಕರ್ ಅವರ ಪತ್ನಿ, ಮಗಳಿಗೂ ಕೊರೋನಾ ಪಾಸಿಟಿವ್ - Karavali Times

728x90

22 June 2020

ಸಚಿವ ಡಾ. ಸುಧಾಕರ್ ಅವರ ಪತ್ನಿ, ಮಗಳಿಗೂ ಕೊರೋನಾ ಪಾಸಿಟಿವ್



ಬೆಂಗಳೂರು (ಕರಾವಳಿ ಟೈಮ್ಸ್) : ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್‌ ಅವರ ಪತ್ನಿ ಹಾಗೂ ಮಗಳಿಗೂ ಕೊರೊನಾ ವೈರಸ್‌‌ ಸೋಂಕು ಇರುವುದು ಇಂದು ದೃಢಪಟ್ಟಿದೆ. ಈ ಕುರಿತು ಸಚಿವ ಸುಧಾಕರ್‌ ಅವರೇ ಸ್ವತಃ ಟ್ವೀಟ್ ಮಾಡಿ ಖಚಿತಪಡಿಸಿದ್ದಾರೆ.

ಸುಧಾಕರ್ ಅವರ ಮನೆ ಕೆಲಸದವರಿಗೆ ಸೋಂಕು ದೃಢಪಟ್ಟಿತ್ತು. ನಿನ್ನೆ ಬೆಳಗ್ಗೆ ಸುಧಾಕರ್ ಅವರ 82 ವರ್ಷ ತಂದೆಯ ಆರೋಗ್ಯದಲ್ಲಿ ಏರುಪೇರು ಕಂಡುಬಂದಿದ್ದು ಕೆಮ್ಮು ಮತ್ತು ಉಸಿರಾಟದ ಸಮಸ್ಯೆಯಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸುಧಾಕರ್ ಅವರ ತಂದೆಯ ಗಂಟಲು ದ್ರವ ಸಂಗ್ರಹಿಸಿ ಪರೀಕ್ಷಿಸಿದಾಗ ಅವರಿಗೂ ಸೋಂಕು ತಗುಲಿರುವುದು ದೃಢಪಟ್ಟಿದೆ.

ಇನ್ನು ಮನೆಯವರೆಲ್ಲರ ಗಂಟಲು ದ್ರವ ಮಾದರಿ ಪರೀಕ್ಷಿಸಿದ್ದು ಪತ್ನಿ ಮತ್ತು ಮಗಳಿಗೆ ಸೋಂಕು ದೃಢಪಟ್ಟಿದ್ದು, ನಾನು ಮತ್ತು ನನ್ನ ಇಬ್ಬರು ಗಂಡು ಮಕ್ಕಳ ವರದಿ ನೆಗೆಟಿವ್ ಬಂದಿದೆ ಎಂದು ಸುಧಾಕರ್ ಟ್ವೀಟ್ ಮಾಡಿದ್ದಾರೆ.









  • Blogger Comments
  • Facebook Comments

0 comments:

Post a Comment

Item Reviewed: ಸಚಿವ ಡಾ. ಸುಧಾಕರ್ ಅವರ ಪತ್ನಿ, ಮಗಳಿಗೂ ಕೊರೋನಾ ಪಾಸಿಟಿವ್ Rating: 5 Reviewed By: karavali Times
Scroll to Top