✍️ - ಡಿ.ಎಸ್.ಐ.ಬಿ ಪಾಣೆಮಂಗಳೂರು
ಕೋವಿಡ್-೧೯ ಕೊರೊನ ಎಂಬ ವೈರಸ್ ಇಡೀ ಪ್ರಪಂಚವನ್ನೇ ಬೆಚ್ಚಿ ಬೀಳಿಸಿದೆ. ದೂರದ ಪ್ರದೇಶದಲ್ಲಿ ಸುದ್ದಿಯಾದ ಈ ಒಂದು ವೈರಸ್ ನಮ್ಮ ಸುತ್ತಮುತ್ತಲಿನಲ್ಲಿ ತಿರುಗಾಡುತ್ತಿರುವುದರಿಂದ ಜೀವದ ಭಯ ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ನಾವು ಎಷ್ಟೇ ಜಾಗೃತರಾದರು ನಮ್ಮನ್ನೇ ಹುಡುಕಿಕೊಂಡು ಬರುತ್ತಿರುವ ಈ ಒಂದು ಕೊರೊನದಿಂದ ಗೆಲ್ಲಲು ನಮ್ಮಿಂದ ಸಾಧ್ಯವಾಗುತ್ತಿಲ್ಲ. ಇದಕ್ಕೆ ಕಾರಣವು ಕೂಡ ನಾವೇ ಆಗಿದ್ದೇವೆ ಎಂಬುದು ಮರೆಯುವಂತಿಲ್ಲ. ಇದಕ್ಕೆಲ್ಲ ನಮ್ಮ ಅತಿ ಬುದ್ಧಿವಂತಿಕೆಯು ಕೂಡ ಕಾರಣವಾಗಿದೆ. ಹೌದು ನಮಗೆ ಎಚ್ಚರಿಕೆಯನ್ನು ಪದೆ ಪದೆ ನೀಡುತ್ತಿದ್ದರು ನಾವು ಅವುಗಳನ್ನು ಸರಿಯಾಗಿ ಪಾಲಿಸುತ್ತಿಲ್ಲ. ಮಾರ್ಚ್ ತಿಂಗಳ ಸಮಯದಲ್ಲಿ ಬಂದ ಕೊರೊನವನ್ನು ಅಲ್ಲಿಂದಲೇ ಓಡಿಸುವ ಅದೆಷ್ಟೋ ಮಾರ್ಗಗಳಿದ್ದರು ಅತಿ ಬುದ್ಧಿವಂತಿಕೆಯಿಂದಾಗಿ ನಮ್ಮಿಂದ ಓಡಿಸಲು ಸಾಧ್ಯವಾಗಿಲ್ಲ. ಸುಮಾರು ಹದಿನೈದು- ಇಪ್ಪತ್ತು ದಿನಗಳ ಕಾಲ ಕಠಿಣ ಕ್ರಮವಾಗಿ ಒಬ್ಬರನ್ನು ಹೊರಗಡೆ ಬಿಡದೆ ಕಾಪಾಡಿಕೊಂಡಿದ್ದರೆ ಯಾವ ಕೊರೊನ ಕೂಡ ಇವತ್ತು ಇರುತ್ತಿರಲಿಲ್ಲ. ಬೆಳಗ್ಗೆಯಿಂದ ಸಂಜೆ ತನಕ ಸಾರ್ವಜನಿಕ ಸ್ಥಳಗಳಲ್ಲಿ ಓಡಾಟ ಮಾಡಲು ಅನುಮತಿಕೊಟ್ಟು, ರಾತ್ರಿ ಮನೆಯೊಳಗೆ ಭದ್ರತೆಯಿಂದ ಇರಿ ಎಂಬ ಮೂರ್ಖತನದ ಮಾಹಿತಿಯನ್ನು ನೀಡುವುದರಿಂದ ಕೊರೊನ ಮತ್ತಷ್ಟು ಬೆಳೆಯುತ್ತಾ ಬಂತು. ಕಾಪಾಡಿಕೊಳ್ಳುವುದಕ್ಕಿಂತ ಕೆಲವರಿಗೆ ಜಾತಿ ಧರ್ಮವೇ ಮುಖ್ಯವಾಯಿತು. ಒಂದು ಕಡೆ ಜೀವದ ಭಯವಾದರೆ ಇನ್ನೊಂದು ಕಡೆ ಕೊರೊನದಲ್ಲು ಜಾತಿ ಧರ್ಮ ಹುಡುಕಿಕೊಂಡು ಜನರ ನಂಬಿಕೆಗಳಿಗೆ ಧಕ್ಕೆ ಉಂಟುಮಾಡಿದರು. ಕೊರೊನಕ್ಕೆ ಯಾವ ಜಾತಿ ಧರ್ಮ ಕೂಡ ಇಲ್ಲದಿದ್ದರೆ ಜನರ ಇಂದು ಅದರಲ್ಲೂ ಲಾಭಾಂಶ ಪಡೆಯುತ್ತ ಮತ್ತಷ್ಟು ಬುದ್ದಿ ಇಲ್ಲದವರಂತೆ ಜೀವಿಸುತ್ತಿದ್ದಾರೆ. ಇದು ಸೃಷ್ಟಿಕರ್ತ ಸೃಷ್ಟಿಸಿ ಕಳುಹಿಸಿದ ವೈರಸ್ ಎಂಬುದನ್ನು ಮರೆತು ಜನರೇ ಕಿಚನ್ ರೂಂನಲ್ಲಿ ತಯಾರಿಸಿದ್ದಂತೆ ಭಾವಿಸುತ್ತಿರುವುದು ಅತ್ಯಂತ ಮೂರ್ಖತನದ ಭಾವನೆ ಎಂದು ನಾವು ಅರ್ಥೈಸಬೇಕಾಗಿದೆ.
ಇಷ್ಟು ದಿನ ಜನರನ್ನು ಮನೆಯೊಳಗೆ ಇರಲು ಹೇಳಿ ಇಷ್ಟ ಬಂದಂತೆ ಒಂದೊಂದು ಅಧಿಕಾರಿಗಳು ದಿನಕ್ಕೆ ಒಂದೊಂದು ಹೇಳಿಕೆಯನ್ನು ಕೊಟ್ಟು ಜನರು ಇಂದು ಗೊಂದಲಕ್ಕೀಡಾಗಿದ್ದಾರೆ. ಬೆಳಿಗ್ಗೆ ಊರಿಡಿ ಸುತ್ತಲೂ ಅನುಮತಿ ಕೊಟ್ಟು ರಾತ್ರಿ ಮನೆಯೊಳಗೆ ಇರಲು ಹೇಳಿದರೆ ಬೆಳಿಗ್ಗೆ ಹೊತ್ತು ಕೊರೊನ ಇರುವುದಿಲ್ಲವೇ..? ಅನಾವಶ್ಯಕವಾದ ಕಾನೂನುಗಳನ್ನು ಮಾಡುತ್ತಿರುವುದರಿಂದ ಇನ್ನಷ್ಟು ಪ್ರಕರಣಗಳು ಹುಟ್ಟುತ್ತಿವೆ ಎಂಬ ಪರಿಜ್ಞಾನವಾದರು ಇದೆಯೇ..? ಸುಮಾರು ಎರಡು ತಿಂಗಳುಗಳ ಕಾಲ ಜನರನ್ನು ಕೂಡಿ ಹಾಕಿ ಏನಾದರೂ ಪ್ರಯೋಜನವಾಯಿತೇ..? ರಾತ್ರಿ ಮನೆಯಲ್ಲಿ ಬೆಳಿಗ್ಗೆ ರಸ್ತೆಯಲ್ಲಿರಲು ಕೊರನ ಸೂರ್ಯ ಅಲ್ಲ ಎಂಬುದನ್ನು ಮೊದಲು ಅರ್ಥೈಸಿ. ಅಷ್ಟು ದಿನಗಳ ಕಾಲ ಮಾಡಿದ ಅಷ್ಟೊಂದು ಜಾಗೃತಿಗಳು ಏನಾದರೂ ಪ್ರಯೋಜನವಾಯಿತೇ..? ಪಾಸ್ ಇರುವವರಿಗೆ, ವಿಐಪಿಗಳಿಗೆ ಇನ್ನಿತರರಿಗೆ ಸುತ್ತಾಡಲು ಅವಕಾಶಕೊಟ್ಟು ಉಳಿದವರನ್ನು ಒಳಗಡೆ ಇರಲು ಹೇಳಿದರೆ ಎಲ್ಲಿಂದ ಕೊರೊನ ಹೋಗಲು ಸಾಧ್ಯ..? ನೀವು ಹೇಳಿದಂತೆ ಜನರು ಕೇಳುತ್ತಿದ್ದಾರೆ. ನೀವು ಅನಾವಶ್ಯಕ ಮಾಹಿತಿಯನ್ನು ನೀಡುವಾಗ ಜನರು ನಿಮ್ಮನ್ನು ಬಿಟ್ಟು ಅವರ ಇಷ್ಟದಂತೆ ಜೀವಿಸುತ್ತಿದ್ದಾರೆ. ಹೀಗೆ ಮುಂದುವರಿದರೆ ಖಂಡಿತವಾಗಿಯೂ ಯಾರಿಗೂ ಕೊರೊನದಿಂದ ಗೆಲ್ಲಲು ಸಾಧ್ಯವಾಗುವುದಿಲ್ಲ. ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದರಿಂದ ಮತ್ತೊಮ್ಮೆ ಸಂಪೂರ್ಣ ಲಾಕ್‌ಡೌನ್ ಮಾಡಿ ಜನರನ್ನು ಕಾಪಾಡಿಕೊಳ್ಳಬೇಕಾಗಿದೆ. ಮತ್ತೊಮ್ಮೆ ಲಾಕ್‌ಡೌನ್ ಮಾಡುವುದಾದರೆ ದಯವಿಟ್ಟು ಸಾರ್ವಜನಿಕರಿಗೆ ಎರಡು ಮೂರು ದಿನಗಳ ಕಾಲ ಅಗತ್ಯ ವಸ್ತುಗಳನ್ನು ಖರೀದಿಸಲು ಅನುಮತಿಕೊಟ್ಟು ಸಂಪೂರ್ಣವಾಗಿ ಬಂದ್ ಮಾಡಿ. ಆಸ್ಪತ್ರೆ ಬಿಟ್ಟರೆ ಇನ್ನಿತರ ಎಲ್ಲವನ್ನೂ ಬಂದ್ ಮಾಡಿಸಿ ಒಂದೇ ಒಂದು ವ್ಯಕ್ತಿಯನ್ನು ಹೊರಗಡೆ ಬರದಂತೆ ನೋಡಿಕೊಂಡಲ್ಲಿ ಮಾತ್ರ ಕೊರೊನ ನಮ್ಮನ್ನು ಬಿಟ್ಟು ಹೋಗಲು ಸಾಧ್ಯ. ನಷ್ಟವಾಗುತ್ತಿವೆ ಎಂದು ಜನರನ್ನು ಹೊರಗಡೆ ಬಿಟ್ಟರೆ ಖಂಡಿತವಾಗಿಯೂ ಕೊರೊನದಿಂದ ಜಯಗಳಿಸಲು ಸಾಧ್ಯವಿಲ್ಲ. ಅನಾವಶ್ಯಕ ಮಾಹಿತಿಯನ್ನು ಕೊಟ್ಟು ಜನರನ್ನು ರಸ್ತೆಗೆ ಇಳಿಸಿರುವುದರಿಂದ ಇಂದು ಮತ್ತಷ್ಟು ಪ್ರಕರಣಗಳು ಉಂಟಾಗಲು ಕಾರಣವಾಯಿತು.
ಇನ್ನಾದರು ಸರಿಯಾದ ಕ್ರಮಗಳನ್ನು ಕೈಗೊಂಡು ಸರಕಾರ ಜನರನ್ನು ಕಾಪಾಡಿಕೊಳ್ಳದಿದ್ದರೆ ಖಂಡಿತವಾಗಿಯೂ ಕೊರೊನದಿಂದ ಜಯಗಳಿಸಲು ಯಾರಿಗೂ ಸಾಧ್ಯವಿಲ್ಲ.
ವಿದೇಶದಿಂದ ಬರುವಾಗ ಇಲ್ಲದ ಕೊರೊನ ಸ್ವದೇಶಕ್ಕೆ ತಲುಪುವಾಗ ಎಲ್ಲಿಂದ ಬರುತ್ತವೆ..? ಹಾಗಾದರೆ ವಿದೇಶದಲ್ಲಿ ಪರಿಶೀಲನೆ ಮಾಡುವುದಿಲ್ಲವೇ..? ಅವರಿಗೆ ಪಾಸಿಟಿವ್ ಎಂದು ತಿಳಿದರು ಯಾಕಾಗಿ ಕಳುಹಿಸುತ್ತಾರೆ..? ಒಂದು ವೈರಸ್‌ನಲ್ಲಿ ಹಲವಾರು ಉತ್ತರಗಳಿಲ್ಲದ ಪ್ರಶ್ನೆಗಳು ಮೂಡಿಬರುತ್ತಿವೆ. ಎಲ್ಲಾ ವಿಷಯಗಳನ್ನು ಗಂಭೀರವಾಗಿ ಪರಿಗಣಿಸಿ ಒಂದು ಉತ್ತಮವಾದ ಮಾರ್ಗದರ್ಶನ ನೀಡಿ ಕೊರೊನದಿಂದ ಕಾಪಾಡಿಕೊಳ್ಳಬೇಕಾಗಿದೆ.
ರಾಜ್ಯ, ವಿದೇಶಗಳಿಂದ ಬರುವ ಎಲ್ಲರನ್ನೂ ಕೊರೊನ ಕೊನೆಗೊಳ್ಳುವ ತನಕ ಪ್ರವೇಶಿಸದಂತೆ ತಡೆಯಿರಿ. ಸಂಪೂರ್ಣವಾಗಿ ಎಚ್ಚರಿಕೆಯಿಂದ ನೋಡಿಕೊಂಡರೆ ಕೊರೊನದಿಂದ ಸುಲಭವಾಗಿ ಜಯಗಳಿಸಲು ಸಾಧ್ಯ.
0 comments:
Post a Comment