ಬಂಟ್ವಾಳ (ಕರಾವಳಿ ಟೈಮ್ಸ್) : ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆಯ ಅಂತಿಮ ಬಿಸಿ ಜನಸಾಮಾನ್ಯರಿಗೆ ಹೊರೆಯಾಗುತ್ತದೆ. ತೈಲ ಕಂಪೆನಿಗಳ ಹಿತ ಕಾಪಾಡಲು ಕೇಂದ್ರದ ನರೇಂದ್ರ ಮೋದಿ ಸರಕಾರ ನಿರಂತರ ಪೆಟ್ರೋಲ್-ಡೀಸೆಲ್ ಬೆಲೆ ಏರಿಸುತ್ತಿದೆ ಎಂದು ಮಾಜಿ ಸಚಿವ ಬಿ ರಮಾನಾಥ ರೈ ಆರೋಪಿಸಿದರು.
ಬಂಟ್ವಾಳ ಹಾಗೂ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಆಶ್ರಯದಲ್ಲಿ ಕೇಂದ್ರ ಸರಕಾರದ ತೈಲ ಬೆಲೆ ಏರಿಕೆ ವಿರೋಧಿಸಿ ಸೋಮವಾರ ಬಿ ಸಿ ರೋಡಿನಲ್ಲಿ ಹಮ್ಮಿಕೊಂಡ ಪಾದಯಾತ್ರೆ ಹಾಗೂ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಕಪ್ಪು ಹಣ ವಾಪಾಸ್ ಭರವಸೆ ಮೂಲಕ ಜನರಲ್ಲಿ ಒಂದು ರೀತಿಯ ಆಕಾಶವನ್ನೇ ಹೊತ್ತುವ ತರುವ ಕಲ್ಪನೆ ಮೂಡಿಸಿ ಅಧಿಕಾರಕ್ಕೇರಿದ ಮೋದಿ ಸರಕಾರ ಕಳೆದ ಆರು ವರ್ಷಗಳಿಂದಲೂ ಕೇವಲ ಬಣ್ಣದ ಭಾಷಣಗಳ ಮೂಲಕವೇ ದಿನಕಳೆದಿವೆ ಹೊರತು ಯಾವುದೇ ಜನಪರ ಯೋಜನೆಗಳನ್ನು ಜಾರಿಗೆ ತರುವಲ್ಲಿ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೇಶದ ಇಡೀ ಅರ್ಥ ವ್ಯವಸ್ಥೆಯೇ ಬುಡಮೇಲಾಗಿದ್ದರೂ ಕೇಂದ್ರ ಸರಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ಇನ್ನು ಯಾವುದೇ ಜನಪರ ಯೋಜನೆಗಳ ಬಗ್ಗೆ ಚಿಂತಿಸದೆ ಕಾರ್ಪೊರೇಟ್ ಜಗತ್ತಿನ ಕಪಿಮುಷ್ಠಿಯಲ್ಲಿ ಬಂಧಿಯಾಗಿ ಸಂಪೂರ್ಣ ಜನವಿರೋಧಿಯಾಗಿಯೇ ವರ್ತಿಸುತ್ತಿದೆ ಎಂದ ರಮಾನಾಥ ರೈ ಸರಕಾರದ ವೈಫಲ್ಯಗಳನ್ನು ಪ್ರಶ್ನಿಸುವ ಜನರ ಹಕ್ಕುಗಳನ್ನೂ ಕೂಡಾ ಕಸಿದುಕೊಳ್ಳುವ ನಿಟ್ಟಿನಲ್ಲಿ ಸರಕಾರ ವರ್ತಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈ ಹಿಂದಿನ ಸರಕಾರದ ಅವಧಿಯಲ್ಲಿ ತೈಲ ಬೆಲೆಯಲ್ಲಿ ಕೊಂಚ ಏರಿಕೆಯಾಗಿದ್ದರೂ ಬೊಬ್ಬೆ ಹಾಕುತ್ತಿದ್ದವರು ಇಂದು ಬೇಕಾಬಿಟ್ಟಿಯಾಗಿ ನಿತ್ಯವೂ ಬೆಲೆ ಏರಿಕೆ ಆಗುತ್ತಿದ್ದರೂ ಯಾವ ಬಿಲದಲ್ಲಿ ಅಡಗಿ ಕೂತಿದ್ದಾರೆ ಎಂದು ರಮಾನಾಥ ರೈ ಇದೇ ವೇಳೆ ಪ್ರಶ್ನಿಸಿದರು.
ಕೈಕಂಬ ಪೊಳಲಿ ದ್ವಾರದ ಬಳಿಯಿಂದ ಕಾಲ್ನಡಿಯಲ್ಲಿ ಹೊರಟ ಪ್ರತಿಭಟನಾ ಜಾಥಾ ಬಿ ಸಿ ರೋಡು ಜಂಕ್ಷನ್ನಿನಲ್ಲಿ ಸಮಾಪ್ತಿಗೊಂಡು ಬಳಿಕ ಪ್ರತಿಭಟನಾ ಸಭೆ ನಡೆಸಲಾಯಿತು. ಜಾಥಾದಲ್ಲಿ ವಾಹನಕ್ಕೆ ಹಗ್ಗ ಕಟ್ಟಿ ಎಳೆಯುವ ಹಾಗೂ ವಿವಿಧ ಘೋಷಣೆಗಳ ಮೂಲಕ ಪ್ರತಿಭಟನಾಕಾರರು ತೈಲ ಬೆಲೆ ಏರಿಕೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ತಹಶೀಲ್ದಾರ್ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ ಮಾಣಿ, ಜಿ ಪಂ ಸದಸ್ಯರುಗಳಾದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಬಿ ಪದ್ಮಶೇಖರ ಜೈನ್, ಎಂ ಎಸ್ ಮುಹಮ್ಮದ್, ಬಂಟ್ವಾಳ ತಾ ಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರಾ, ಉಪಾಧ್ಯಕ್ಷ ಬಿ ಎಂ ಅಬ್ಬಾಸ್ ಅಲಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಮಲ್ಲಿಕಾ ಶೆಟ್ಟಿ, ಪ್ರಮುಖರಾದ ಸದಾಶಿವ ಬಂಗೇರ, ಸಂಜೀವ ಪೂಜಾರಿ ಬೊಳ್ಳಾಯಿ, ಕೆ ಪದ್ಮನಾಭ ರೈ, ಸುದರ್ಶನ್ ಜೈನ್, ಮುಹಮ್ಮದ್ ನಂದರಬೆಟ್ಟು, ಯೂಸುಫ್ ಕರಂದಾಡಿ, ಲುಕ್ಮಾನ್ ಬಿ ಸಿ ರೋಡು, ಗಂಗಾಧರ ಪೂಜಾರಿ, ಹಸೈನಾರ್ ಶಾಂತಿಅಂಗಡಿ, ಲೋಲಾಕ್ಷ ಶೆಟ್ಟಿ, ಅಬೂಬಕ್ಕರ್ ಸಿದ್ದೀಕ್ ಗುಡ್ಡೆಅಂಗಡಿ, ಪ್ರಶಾಂತ್ ಕುಲಾಲ್, ಇಬ್ರಾಹಿಂ ನವಾಝ್ ಬಡಕಬೈಲು, ಮುಹಮ್ಮದ್ ನಂದಾವರ, ಜಯಂತಿ ಪೂಜಾರಿ, ಲತೀಫ್ ಖಾನ್ ಗೂಡಿನಬಳಿ, ಜಿ ಎಂ ಇಬ್ರಾಹಿಂ ಮಂಚಿ, ಚಿತ್ತರಂಜನ್ ಶೆಟ್ಟಿ ಬೊಂಡಾಲ, ಉಮರ್ ಕುಂಞÂ ಸಾಲೆತ್ತೂರು, ವೆಂಕಪ್ಪ ಪೂಜಾರಿ, ಡೆಂಝಿಲ್ ನೊರೊನ್ಹಾ ಮೊದಲಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
0 comments:
Post a Comment