ಪುತ್ತೂರು (ಕರಾವಳಿ ಟೈಮ್ಸ್) : ತಾಲೂಕಿನ ಕುಂಬ್ರ ಸಮೀಪದ ಚೆನ್ನಾವರ ಎಸ್ಸೆಸ್ಸೆಫ್ ಶಾಖಾ ವತಿಯಿಂದ ಪರಿಸರ ದಿನಾಚರಣೆ ಪ್ರಯುಕ್ತ ಇಲ್ಲಿನ ಸರಕಾರಿ ಪ್ರಾಥಮಿಕ ಶಾಲೆಗೆ ಸಸಿ ವಿತರಿಸಲಾಯಿತು.
ಈ ಸಂದರ್ಭ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಹನೀಫ್ ಇಂದ್ರಾಜೆ, ಎಸ್ಸೆಸ್ಸೆಫ್ ನಾಯಕರಾದ ಅಮೀನ್ ಸಅದಿ ಅಝ್ಝುಹ್ರಿ, ಯಹ್ಯಾ ಖಾನ್ ಮುಸ್ಲಿಯಾರ್, ಕಾರ್ಯದರ್ಶಿ ಅಬ್ದುಲ್ ಬಾಸಿತ್, ಆಸಿಫ್ ಪಿ.ಎಂ., ಇಬ್ರಾಹಿಂ ಮುನಾಝ್, ಎಸ್.ವೈ.ಎಸ್.ನ ಅಬ್ದುಲ್ ಸತ್ತಾರ್, ಶಾಲಾ ಮುಖ್ಯ ಶಿಕ್ಷಕಿ ಶಾಂತ ಕುಮಾರಿ ಹಾಗೂ ಶಾಲಾಭಿವೃಧ್ಧಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
0 comments:
Post a Comment