ಬಂಟ್ವಾಳ (ಕರಾವಳಿ ಟೈಮ್ಸ್) : ತಾಲೂಕಿನ ಬೆಂಜನಪದವಿನಲ್ಲಿ ಬುಧವಾರ ರಾತ್ರಿ ಕಾರು ಹಾಗೂ ದ್ವಿಚಕ್ರ ವಾಹನದ ನಡುವೆ ನಡೆದ ಅಪಘಾತದಲ್ಲಿ ದ್ವಿಚಕ್ರ ವಾಹನದಲ್ಲಿ ಸವಾರಿ ಹೊರಟಿದ್ದ ಯುವತಿ ಸ್ಥಳೀಯ ನಿವಾಸಿ ಶ್ಯಾಮಲಾ (23) ಮೃತಪಟ್ಟಿದ್ದು, ಮತ್ತೋರ್ವ ಯುವತಿ ಹರ್ಷಿತಾ ಗಂಭೀರ ಗಾಯಗೊಂಡಿದ್ದಾರೆ.
ಬೆಂಜನಪದವಿನಲ್ಲಿ ಅತ್ಯಂತ ವೇಗವಾಗಿ ಬಂದ ಕಾರು ಯುವತಿಯರು ಸಂಚರಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಬಳಿಕ ಪಾದಚಾರಿಯೋರ್ವರಿಗೂ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಘಟನೆಯ ಬಳಿಕ ಕಾರು ಚಾಲಕ ಪರಾರಿಯಾಗಿದ್ದಾನೆ ಎನ್ನಲಾಗಿದ್ದು, ಅಪಘಾತದ ತೀವ್ರತೆಗೆ ದ್ವಿಚಕ್ರ ವಾಹನ ಸಂಪೂರ್ಣ ಜಖಂಗೊಂಡಿದ್ದು, ಮುಂಭಾಗ ಸ್ಕೂಟರಿನಿಂದ ಬೇರ್ಪಟ್ಟು ಕಳಚಿ ಬಿದ್ದಿದೆ. ಕಾರಿನ ಮುಂಭಾಗ ಕೂಡಾ ಜಖಂಗೊಂಡಿದೆ. ಮೃತ ಯುವತಿ ಬಂಟ್ವಾಳ ಕ್ಷೇತ್ರ ಸಮೂಹ ಸಂಪನ್ಮೂಲ ಕೇಂದ್ರದ ಉದ್ಯೋಗಿ ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ಬಂಟ್ವಾಳ ಸಂಚಾರಿ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದ್ದಾರೆ.
0 comments:
Post a Comment