ಬಂಟ್ವಾಳ (ಕರಾವಳಿ ಟೈಮ್ಸ್) : ವಿಟ್ಲ ಪಿರ್ಕಾ ಬೀಡಿ ಕೆಲಸಗಾರರ ಸಂಘ (ಸಿಐಟಿಯು) ವತಿಯಿಂದ ಬೀಡಿ ಕಾರ್ಮಿಕರಿಗೆ ಪರಿಹಾರ ನೀಡುವಂತೆ ಆಗ್ರಹಿಸಿ ಉಪತಹಶೀಲ್ದಾರ್ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.
ಕಳೆದ ಎರಡು ತಿಂಗಳಿಗೂ ಮಿಕ್ಕಿದ ಲಾಕ್‍ಡೌನ್ ಅವಧಿಯಲ್ಲಿ ಬೀಡಿ ಕಾರ್ಮಿಕರು ಕೆಲಸವಿಲ್ಲದೆ ಕುಟುಂಬ ನಿರ್ವಹಣೆ ಮಾಡಲೂ ಸಾಧ್ಯವಾಗದೆ ಕಂಗಾಲಾಗಿದ್ದಾರೆ. ಬೀಡಿ ಕಾರ್ಮಿಕರಿಗೆ ರಾಜ್ಯ ಸರಕಾರವಾಗಲೀ, ಕಾರ್ಮಿಕ ಕಲ್ಯಾಣ ಮಂಡಳಿಯಿಂದಾಗಲೀ, ಅಥವಾ ಮುಖ್ಯಮಂತ್ರಿ ಪರಿಹಾರ ನಿಧಿಯಿಂದಾಗಲೀ, ಅಥವಾ ಬೀಡಿ ಮಾಲಕರಿಂದಾಗಲೀ ಇದುವರೆಗೂ ಯಾವುದೇ ಪರಿಹಾರ ಘೋಷಣೆಯಾಗಿಲ್ಲ. ಅತ್ಯಂತ ಬಡ ಕಾರ್ಮಿಕ ವಿಭಾಗವಾದ ಬೀಡಿ ಕಾರ್ಮಿಕರು ಸರಕಾರದ ಪರಿಹಾರದ ನಿರೀಕ್ಷೆಯಲ್ಲಿದ್ದಾರೆ. ಲಾಕ್‍ಡೌನ್ ಅವಧಿ ರದ್ದುಪಡಿಸಲಾಗಿದ್ದರೂ ಬೀಡಿ ಕಾರ್ಮಿಕರ ಸಮಸ್ಯೆ ಪರಿಹಾರವಾಗಿಲ್ಲ.
ತಕ್ಷಣ ಸರಕಾರ ಬೀಡಿ ಕಾರ್ಮಿಕರ ಸಮಸ್ಯೆಗೆ ಸ್ಪಂದಿಸಿ ಕನಿಷ್ಠ 6 ಸಾವಿರ ರೂಪಾಯಿ ಪರಿಹಾರ ಘೋಷಿಸುವಂತೆ ವಿಟ್ಲ ಪಿರ್ಕಾ ಬೀಡಿ ಕೆಲಸಗಾರರ ಸಂಘದ ಪ್ರಮುಖರು ಆಗ್ರಹಿಸಿದ್ದಾರೆ. ನಿಯೋಗದಲ್ಲಿ ಸಂಘದ ಕಾರ್ಯದರ್ಶಿ ರಾಮಣ್ಣ ವಿಟ್ಲ, ಅಧ್ಯಕ್ಷ ದೇಜಪ್ಪ ಪೂಜಾರಿ ಮೊದಲಾದವರು ಇದ್ದರು.
0 comments:
Post a Comment