ಬಂಟ್ವಾಳ (ಕರಾವಳಿ ಟೈಮ್ಸ್) : ಬಂಟ್ವಾಳ ಎಸ್ಕೆಎಸ್ಸೆಸ್ಸೆಫ್ ಯುನಿಟ್ ಆಶ್ರಯದಲ್ಲಿ ಶುಕ್ರವಾರ (ಜೂನ್ 26) ಸಮಸ್ತ ಸ್ಥಾಪನಾ ದಿನ ಆಚರಿಸಲಾಯಿತು.
ಬಂಟ್ವಾಳ ಜುಮಾ ಮಸೀದಿ ಖತೀಬ್ ಇಸ್ಮಾಯಿಲ್ ಫೈಝಿ ಧ್ವಜಾರೋಹಣ ನೆರವೇರಿಸಿದರು. ಆದಂ ಫೈಝಿ ಮುಖ್ಯ ಭಾಷಣಗೈದರು. ಎಸ್ಕೆಎಸ್ಸೆಸ್ಸೆಫ್ ಬಂಟ್ವಾಳ ಯುನಿಟ್ ಅಧ್ಯಕ್ಷ ಹಾಜಿ ಅಬ್ದುಲ್ ರಹಿಮಾನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಬಂಟ್ವಾಳ ಜುಮಾ ಮಸೀದಿ ಅಧ್ಯಕ್ಷ ಹೈದರ್ ಅಲಿ, ತೌಹೀದ್ ಆಂಗ್ಲ ಮಾಧ್ಯಮ ಶಾಲಾ ಪಧಾನ ಕಾರ್ಯದರ್ಶಿ ಖಾದರ್ ಮಾಸ್ಟರ್, ಎಸ್ಕೆಎಸ್ಸೆಸ್ಸೆಫ್ ಬಂಟ್ವಾಳ ಯುನಿಟ್ ಕೋಶಾಧಿಕಾರಿ ರಫೀಕ್ ಬಿ.ಕೆ., ಉಪಾದ್ಯಕ್ಷ ಸವಾಝ್ ಬಂಟ್ವಾಳ, ಪ್ರಮುಖರಾದ ಬಿಲಾಲ್, ಅಬೂ ನಿಶಾಂ, ಯಹ್ಯಾ, ಸಲೀಂ, ಝಹೀದ್ ಮಿದಾಝ್, ಅಫ್ತಾಬ್ ಅಲಿ, ಝಾಹಿರ್ ಮೊದಲಾದವರು ಭಾಗವಹಿಸಿದ್ದರು. ಯುನಿಟ್ ಪ್ರದಾನ ಕಾರ್ಯದರ್ಶಿ ಹಾರೂನ್ ರಶೀದ್ ಬಂಟ್ವಾಳ ಸ್ವಾಗತಿಸಿ, ವಂದಿಸಿದರು.
0 comments:
Post a Comment