ಬಂಟ್ವಾಳ (ಕರಾವಳಿ ಟೈಮ್ಸ್) : ಭಾರತೀಯ ಜನತಾ ಪಾರ್ಟಿ ಬಂಟ್ವಾಳ ವಿಧಾನಸಭಾ ಕ್ಷೇತ್ರ ವತಿಯಿಂದ ಕ್ಷೇತ್ರಾಧ್ಯಕ್ಷ ದೇವಪ್ಪ ಪೂಜಾರಿ ನೇತೃತ್ವದಲ್ಲಿ ಮಾಸ್ಕ್ ದಿನಾಚರಣೆಯ ಅಂಗವಾಗಿ ನಡಿಗೆ ಕಾರ್ಯಕ್ರಮ ಬಿ ಸಿ ರೋಡು ಬಿ.ಜೆ.ಪಿ ಕಚೇರಿಯಿಂದ ನಾರಾಯಣ ಗುರು ವೃತ್ತದವರೆಗೆ ಗುರುವಾರ ನಡೆಯಿತು.
ಬಿಜೆಪಿ ಕ್ಷೇತ್ರಾಧ್ಯಕ್ಷ ದೇವಪ್ಪ ಪೂಜಾರಿ ಮಾತನಾಡಿ ಕೋವಿಡ್-19 ನಿಯಂತ್ರಣಕ್ಕೆ ಜನತೆ ಮಾಸ್ಕ್ ಕಡ್ಢಾಯವಾಗಿ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು, ಕೇಂದ್ರ ಹಾಗೂ ರಾಜ್ಯ ಸರ್ಕಾರ ಹಾಗೂ ಆರ್ಯೋಗ ಇಲಾಖೆ ಮಾರ್ಗ ಸೂಚಿಯನ್ನು ಪಾಲನೆ ಮಾಡಬೇಕು ಎಂದರು.
ರಾಜ್ಯ ಕ್ಲಿಯೊನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಜಿ ಪಂ ಸದಸ್ಯ ತುಂಗಪ್ಪ ಬಂಗೇರ, ಜಿಲ್ಲಾ ಮೋರ್ಚಾಗಳ ಡಿಜಿಟಲ್ ಸಂಚಾಲಕ ಸಂದೇಶ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಡೊಂಬಯ್ಯ ಅರಳ, ಪ್ರಮುಖರಾದ ರವೀಶ್ ಶೆಟ್ಟಿ, ರಮಾನಾಥ ರಾಯಿ, ಗಣೇಶ್ ರೈ, ಪುರುಷೋತ್ತಮ ಶೆಟ್ಟಿ, ಪ್ರಕಾಶ್ ಅಂಚನ್, ಯಶೋಧರ ಕರ್ಬೆಟ್ಟು, ಮೋನಪ್ಪ ದೇವಸ್ಯ, ಸುದರ್ಶನ್ ಬಜ, ಪ್ರದೀಪ್ ಅಜ್ಜಿಬೆಟ್ಟು, ಭಾರತಿ ಚೌಟ, ಚಂದ್ರಾವತಿ ಪೊಳಲಿ, ಹಾಗೂ ಕ್ಷೇತ್ರ ಪದಾಧಿಕಾರಿಗಳು, ಕ್ಷೇತ್ರ ಮೋರ್ಚಾಗಳ ಅಧ್ಯಕ್ಷ, ಪ್ರಧಾನ ಕಾರ್ಯದಶಿಗಳು, ಶಕ್ತಿ ಕೇಂದ್ರದ ಪ್ರಮುಖರು, ಹಾಗೂ ವಿವಿಧ ಜವಾಬ್ದಾರಿ ಇರುವ ಪ್ರಮುಖರು, ಜನಪ್ರತಿನಿದಿಗಳು, ಕಾರ್ಯಕರ್ತರು ಭಾಗವಹಿಸಿದ್ದರು.
0 comments:
Post a Comment