ಬೆಂಗಳೂರು (ಕರಾವಳಿ ಟೈಮ್ಸ್) : ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಚಿಕ್ಕಪೇಟೆಯನ್ನು ಒಂದು ವಾರ ಕಾಲ ಬಂದ್ ಮಾಡಲು ಸ್ವತಃ ಇಲ್ಲಿನ ವ್ಯಾಪಾರಿಗಳೇ ನಿರ್ಧರಿಸಿದ್ದು, ಮುಂದಿನ ಒಂದು ವಾರ ಚಿಕ್ಕಪೇಟೆ ಬಂದ್ ಆಗಲಿದೆ.
ಚಿಕ್ಕಪೇಟೆಯ ವ್ಯಾಪ್ತಿಯಲ್ಲಿ 25 ಮಂದಿಗೆ ಕೊರೊನಾ ಸೋಂಕು ತಗುಲಿದೆ.
ಚಿಕ್ಕಪೇಟೆಯಲ್ಲಿನ ಸುಮಾರು 8 ರಿಂದ 10 ವ್ಯಾಪಾರಿ ಸಂಘಗಳು ಅಂಗಡಿಗಳನ್ನು ಬಂದ್ ಮಾಡಲು ನಿರ್ಧರಿಸಿದ್ದಾರೆ. ಚಿಕ್ಕಪೇಟೆ ಮಾರುಕಟ್ಟೆ ನಾಳೆಯಿಂದ ಮುಂದಿನ ಭಾನುವಾರದವರೆಗೆ ಬಂದ್ ಮಾಡಲು ವ್ಯಾಪಾರಿಗಳು ನಿರ್ಧರಿಸಿದ್ದಾರೆ.
ಮಾರುಕಟ್ಟೆ ಬಂದ್ ಮಾಡಲು ಎಲೆಕ್ಟ್ರಿಕ್ ಮರ್ಚೆಂಟ್ ಅಸೋಸಿಯೇಷನ್, ಜ್ಯುವೆಲರಿ ಅಸೋಸಿಯೇಷನ್, ಸಿಲ್ವರ್ ಆಂಡ್ ಗೋಲ್ಡ್ ತಯಾರಕರು, ಸ್ವರ್ಣಕಾರ್ ಅಸೋಸಿಯೇಷನ್, ಜೆಮ್ಸ್ & ಪಲ್ರ್ಸ್ ಅಸೋಸಿಯೇಷನ್, ಸಿಲ್ಕ್ ಕ್ಲಾತ್ ಅಸೋಸಿಯೇಷನ್, ಸ್ವಿಚ್ ಗೇರ್ ಅಸೋಸಿಯೇಷನ್, ಹಾರ್ಡ್ ವೇರ್ ಅಸೋಸಿಯೇಷನ್ ಬೆಂಬಲ ನೀಡಿದ್ದಾರೆ.
0 comments:
Post a Comment