ಬಿ.ಸಿ.ರೋಡು-ಪೂಂಜಾಲಕಟ್ಟೆ ರಸ್ತೆ ಕಾಮಗಾರಿ : ವಾಹನ ಸಂಚಾರ ನಿಷೇಧಿಸಿ ಡೀಸಿ ಆದೇಶ - Karavali Times ಬಿ.ಸಿ.ರೋಡು-ಪೂಂಜಾಲಕಟ್ಟೆ ರಸ್ತೆ ಕಾಮಗಾರಿ : ವಾಹನ ಸಂಚಾರ ನಿಷೇಧಿಸಿ ಡೀಸಿ ಆದೇಶ - Karavali Times

728x90

26 June 2020

ಬಿ.ಸಿ.ರೋಡು-ಪೂಂಜಾಲಕಟ್ಟೆ ರಸ್ತೆ ಕಾಮಗಾರಿ : ವಾಹನ ಸಂಚಾರ ನಿಷೇಧಿಸಿ ಡೀಸಿ ಆದೇಶ



ಬಂಟ್ವಾಳ (ಕರಾವಳಿ ಟೈಮ್ಸ್) : ಬಿ ಸಿ ರೋಡು-ಪೂಂಜಾಲಕಟ್ಟೆ ರಾಷ್ಟ್ರೀಯ ಹೆದ್ದಾರಿ ದ್ವಿಪಥ ಹಾಗೂ ಚತುಷ್ಪಥ ಕಾಮಗಾರಿ ನಡೆಯುತ್ತಿರುವ ಹಿನ್ನಲೆಯಲ್ಲಿ ಕಾಮಗಾರಿ ಪೂರ್ಣಗೊಳ್ಳುವವರೆಗೆ ಅಂದರೆ ಜೂನ್ 26 ರಿಂದ ಜುಲೈ 18ರವರೆಗೆ ಸಂಚಾರ ನಿಷೇಧಿಸಿ ಜಿಲ್ಲಾಧಿಕಾರಿ ಸಿಂಧೂ ಬಿ ರೂಪೇಶ್ ಆದೇಶ ಹೊರಡಿಸಿದ್ದಾರೆ.

ನಿಷೇಧಿತ ಅವಧಿಯಲ್ಲಿ ವಾಹನ ಸಂಚಾರಕ್ಕೆ ವಾಹನ ಸವಾರರು ಪರ್ಯಾಯ ರಸ್ತೆಯನ್ನು ಬಳಸುವಂತೆಯೂ ಡೀಸಿ ಆದೇಶದಲ್ಲಿ ತಿಳಿಸಿದ್ದಾರೆ. ಕಾರು, ಜೀಪು, ಟೆಂಪೆÇೀ, ವ್ಯಾನ್ (ಮಿನಿ ವ್ಯಾನ್), ದ್ವಿಚಕ್ರ ವಾಹನಗಳು ಹಾಗೂ ಅಂಬ್ಯುಲೆನ್ಸ್ ಮತ್ತು ದಿನನಿತ್ಯ ಸಂಚರಿಸಬಹುದಾದ ಸಾರ್ವಜನಿಕ ಬಸ್ಸುಗಳು ಮಂಗಳೂರಿನಿಂದ ಪೂÅಂಜಾಲಕಟ್ಟೆಯ ಕಡೆಗೆ ಮಂಗಳೂರು-ಬಿ ಸಿ ರೋಡು-ಬಂಟ್ವಾಳಪೇಟೆ-ಜಕ್ರಿಬೆಟ್ಟು ಮಾರ್ಗವಾಗಿ ಹಾಗೂ ಪೂಂಜಾಲಕಟ್ಟೆಯಿಂದ ಮಂಗಳೂರು ಕಡೆಗೆ ಜಕ್ರಿಬೆಟ್ಟು-ಬಂಟ್ವಾಳ ಪೇಟೆ-ಬಿ ಸಿ ರೋಡು-ಮಂಗಳೂರು ಮಾರ್ಗವಾಗಿ ಸಂಚರಿಸಬಹುದು.

ಮೂಡುಬಿದ್ರೆಯಿಂದ ಬಂಟ್ವಾಳ-ಬಿ ಸಿ ರೋಡು ಕಡೆಗೆ ಮೂಡುಬಿದ್ರೆ-ಬಂಟ್ವಾಳ ಜಂಕ್ಷನ್-ರಾಷ್ಟ್ರೀಯ ಹೆದ್ದಾರಿ-234ರ ಮುಖಾಂತರ ಜಕ್ರಿಬೆಟ್ಟು-ಬಂಟ್ವಾಳ ಪೇಟೆ-ಬಿ ಸಿ ರೋಡು ಮಾರ್ಗವಾಗಿ ಸಂಚರಿಸಬಹುದು.

ಘನ ವಾಹನಗಳ ಸಂಚಾರವನ್ನು ಈ ಮಾರ್ಗದಲ್ಲಿ ಸಂಪೂರ್ಣ ನಿರ್ಬಂಧಿಸಲಾಗಿದೆ. ಟ್ಯಾಂಕರ್‍ಗಳು, ಶಿಪ್ ಕಾರ್ಗೋ ಕಂಟೈನರ್‍ಗಳು, ಲಾಂಗ್ ಚೇಸ್ ವಾಹನಗಳು, ಘನ ವಾಣಿಜ್ಯ ವಾಹನಗಳು, ಮಲ್ಟಿ ಎಕ್ಸಿಲ್ ಟ್ರಕ್ ಟ್ರೈಲರ್‍ಗಳು, ರಾಜಹಂಸ ಮತ್ತು ಎಲ್ಲಾ ಬಗೆಯ ಅಧಿಕ ಭಾರದ ಸರಕು ಸಾಗಾಣೆ ವಾಹನಗಳು ಮಂಗಳೂರಿನಿಂದ ಗುರುವಾಯನಕೆರೆ ಕಡೆಗೆ ಮಂಗಳೂರು-ಬಿ ಸಿ ರೋಡು-ಮಾಣಿ-ಉಪ್ಪಿನಂಗಡಿ ಮೂಲಕ ಕರಾಯ-ಕಲ್ಲೇರಿ-ಗುರುವಾಯನಕೆರೆ ಹಾಗೂ ಗುರುವಾಯನಕೆರೆಯಿಂದ ಮಂಗಳೂರಿನ ಕಡೆಗೆ ಗುರುವಾಯನಕೆರೆ ಮೂಲಕ ಕಲ್ಲೇರಿ-ಕರಾಯ-ಉಪ್ಪಿನಂಗಡಿ-ಮಾಣಿ-ಬಿ ಸಿ ರೋಡು ಮಂಗಳೂರು ಮಾರ್ಗವಾಗಿ ಸಂಚರಿಸಬಹುದು ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ.








  • Blogger Comments
  • Facebook Comments

0 comments:

Post a Comment

Item Reviewed: ಬಿ.ಸಿ.ರೋಡು-ಪೂಂಜಾಲಕಟ್ಟೆ ರಸ್ತೆ ಕಾಮಗಾರಿ : ವಾಹನ ಸಂಚಾರ ನಿಷೇಧಿಸಿ ಡೀಸಿ ಆದೇಶ Rating: 5 Reviewed By: karavali Times
Scroll to Top