ಬಂಟ್ವಾಳ (ಕರಾವಳಿ ಟೈಮ್ಸ್) : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಂಟ್ವಾಳ ತಾಲೂಕು, ಪಾಣೆಮಂಗಳೂರು ವಲಯ, ಪ್ರಗತಿ ಬಂಧು ಸ್ವ ಸಹಾಯ ಸಂಘ ಅಮ್ಟೂರು ಇದರ ಸಹಯೋಗದೊಂದಿಗೆ ಪರಿಸರ ಜಾಗೃತಿ ಮಾಹಿತಿ ಮತ್ತು ಗಿಡ ನಾಟಿ ಕಾರ್ಯಕ್ರಮವು ಅಮ್ಟೂರು ಶ್ರೀಕೃಷ್ಣ ಮಂದಿರದಲ್ಲಿ ನಡೆಯಿತು.
ಒಕ್ಕೂಟದ ಅಧ್ಯಕ್ಷೆ ಚಿತ್ರಾವತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರಗತಿ ಬಂಧು ಒಕ್ಕೂಟದ ಮಾಜಿ ಅಧ್ಯಕ್ಷ ಜಯಂತ ಕಟ್ಟೆಮಾರ್ ಸಂಪಿಗೆಯ ಗಿಡ ನೆಡುವ ಮೂಲಕ ಕಾರ್ಯಕ್ರನಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಕೊರೋನಾದ ಜಾಗೃತಿ ಮತ್ತು ಪರಿಸರ ಸಂರಕ್ಷಣೆಯ ಬಗ್ಗೆ ಮಾಹಿತಿ ನೀಡಿ ನೆರೆದವರಿಗೆ ಗಿಡಗಳನ್ನು ವಿತರಿಸಲಾತು.
ಈ ಸಂದರ್ಭ ಕೃಷಿ ಮೇಲ್ವಿಚಾರಕ ಜನಾರ್ದನ, ವಲಯದ ಮೇಲ್ವಿಚಾರಕಿ ಅಮಿತಾ, ವಿಭಾಗ ಸೇವಾ ಪ್ರತಿನಿಧಿ ವನಿತಾ, ಶ್ರೀಕೃಷ್ಣ ಮಂದಿರದ ಲೆಕ್ಕಪರಿಶೋಧಕ ಕುಶಾಲಪ್ಪ ಅಮ್ಟೂರು, ಒಕ್ಕೂಟ ಸದಸ್ಯ ಪ್ರವೀಣ್ ಮೊದಲಾದವರು ಭಾಗವಹಿಸಿದ್ದರು. ಶ್ರೀದೇವಿ ಸಂಘದ ಬಬಿತಾ ಸ್ವಾಗತಿಸಿದರು. ವಸಂತ ಪೂವಳ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.
0 comments:
Post a Comment