ಲಾಹೋರ್ (ಕರಾವಳಿ ಟೈಮ್ಸ್) : ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಶಾಹಿದ್ ಅಫ್ರಿದಿಗೆ ಕೊರೋನಾ ವೈರಸ್ ತಗುಲಿದೆ. ಈ ಬಗ್ಗೆ ಸ್ವತಃ ಅಫ್ರಿದಿ ಅವರೇ ಟ್ವಿಟರ್‍ನಲ್ಲಿ ಹಂಚಿಕೊಂಡಿದ್ದಾರೆ.
ಗುರುವಾರದಿಂದ ನನಗೆ ಅನಾರೋಗ್ಯ ಕಾಡಿತ್ತು, ಅತೀವವಾಗಿ ಮೈ ಕೈ ನೋವು ಇತ್ತು, ಪರೀಕ್ಷಿಸಿದಾಗ ದುರಾದೃಷ್ಟವಶಾತ್ ಕೊರೋನಾ ಪಾಸಿಟಿವ್ ದೃಢವಾಗಿದೆ, ಶೀಘ್ರ ಗುಣಮುಖವಾಗುವಂತೆ ಅಲ್ಲಾಹುನಲ್ಲಿ ಪ್ರಾರ್ಥಿಸಿ ಎಂದು ಮನವಿ ಮಾಡಿದ್ದಾರೆ.
ಮೇ ತಿಂಗಳ ಆರಂಭದಲ್ಲಿ ಶಾಹಿದ್ ಅಫ್ರಿದಿ ಬಾಂಗ್ಲಾದೇಶದ ಮುಶ್ಫಿಕುರ್ರಹೀಂ ಅವರ ಬ್ಯಾಟ್ ಹರಾಜಿನಲ್ಲಿ ಖರೀದಿಸಿ, ಕೊರೋನಾ ವಿರುದ್ಧ ಹೋರಾಟಕ್ಕಾಗಿ ಹಣ ನೀಡಿದ್ದರು.
0 comments:
Post a Comment