ಮಂಗಳೂರು (ಕರಾವಳಿ ಟೈಮ್ಸ್) : ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳು ಶುಕ್ರವಾರ ಮಂಗಳೂರು, ಮಂಡ್ಯ ಮತ್ತು ಬೆಂಗಳೂರು ಸೇರಿದಂತೆ ಏಕಕಾಲದಲ್ಲಿ ರಾಜ್ಯದ ಹಲವಾರು ತಾಣಗಳ ಮೇಲೆ ದಾಳಿ ನಡೆಸಿದ್ದಾರೆ.
ಮಾಜಿ ವಿಶೇಷ ಭೂಸ್ವಾಧೀನಾಧಿಕಾರಿ ದಾಸೇಗೌಡ ಈ ಎಲ್ಲಾ ನಗರಗಳಲ್ಲಿ ಮನೆ, ಆಸ್ತಿ ಹೊಂದಿದ್ದಾರೆಂದು ವರದಿಯಾಗಿರುವ ಹಿನ್ನಲೆಯಲ್ಲಿ ಅಧಿಕಾರಿಗಳು ಈ ದಾಳಿ ಸಂಘಟಿಸಿದ್ದಾರೆ. ದಾಸೇಗೌಡ ಅವರು ಡಿಸೆಂಬರ್ 19ರಂದು ಐದು ಲಕ್ಷ ರೂಪಾಯಿ ಲಂಚ ಸ್ವೀಕರಿಸುವಾಗ ರೆಡ್ ಹ್ಯಾಂಡಾಗಿ ಎಸಿಬಿ ಬಲೆಗೆ ಬಿದ್ದಿದ್ದರು.
ದಾಳಿಯ ಸಮಯದಲ್ಲಿ ತಂಡವು ಅಪಾರ ಪ್ರಮಾಣದ ದಾಖಲೆಗಳಿಲ್ಲದ ಆಸ್ತಿಗಳನ್ನು ಪತ್ತೆ ಮಾಡಿದೆ ಎನ್ನಲಾಗಿದ್ದು ಮಂಗಳೂರಿನ ಫ್ಲ್ಯಾಟ್ ಸೇರಿದಂತೆ ಮೂರರಿಂದ ನಾಲ್ಕು ಮನೆಗಳನ್ನು ಅಧಿಕಾರಿ ಹೊಂದಿದ್ದಾರೆ ಎಂದು ವರದಿಯಾಗಿದೆ. . ಅವರು ಬೆಂಗಳೂರು ಸೇರಿದಂತೆ ವಿವಿಧ ಸ್ಥಳಗಳಲ್ಲಿ 11 ಸೈಟ್ ಗಳನ್ನು ಹೊಂದಿದ್ದಾರೆ. ಇದಲ್ಲದೆ ಚಿನ್ನದ ಆಭರಣಗಳ ಬೃಹತ್ ಸಂಗ್ರಹವೂ ಕಂಡುಬಂದಿದೆ.
ಅಧಿಕಾರಿಯ ಮೇಲೆ ಅಕ್ರಮವಾಗಿ ಆಸ್ತಿ ಸಂಗ್ರಹಿಸಿದ ಆರೋಪ ಹೊರಿಸಲಾಗಿದ್ದು ಅವರು ಲಂಚ ಸ್ವೀಕಾರ ಪ್ರಕರಣದಲ್ಲಿ ಅಮಾನತಿನಲ್ಲಿದ್ದಾರೆ. ಅವರನ್ನು ಬಂಧಿಸಿದ ನಂತರ ದಾಸೇಗೌಡ ಜಾಮೀನಿನ ಮೇಲೆ ಹೊರಬಂದಿದ್ದರು.
ಮಂಗಳೂರಿನ ಎಸಿಬಿ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್, ಉಪ ಪೊಲೀಸ್ ವರಿಷ್ಠಾಧಿಕಾರಿ ಮಂಜುನಾಥ್ ಮತ್ತು ಇನ್ಸ್‌ಪೆಕ್ಟರ್ ಯೋಗೀಶ್ ನಾಯಕ್ ದಾಳಿಯ ನೇತೃತ್ವ ವಹಿಸಿದ್ದು, ತನಿಖೆ ಮುಂದುವರೆಸಿದ್ದಾರೆ.
0 comments:
Post a Comment