ಬಂಟ್ವಾಳ (ಕರಾವಳಿ ಟೈಮ್ಸ್) : ಕೊರೋನಾ ನಿಗ್ರಹಕ್ಕಾಗಿ ಹೇರಲ್ಪಟ್ಟ ಲಾಕ್ ಡೌನ್ ಸಂದರ್ಭ ದಿನದ ಬಹುತೇಕ ಸಮಯ ಬಿಡುವಿಲ್ಲದೆ ಬಂಟ್ವಾಳ ಕ್ಷೇತ್ರದ ಜನತೆಯ ಹಿತಕ್ಕಾಗಿ ಅಧಿಕಾರ ಇಲ್ಲದಿದ್ದರೂ ನಿರಂತರ ಸೇವೆ ಸಲ್ಲಿಸುತ್ತಿರುವ ಮಾಜಿ ಸಚಿವ ಬಿ ರಮಾನಾಥ ರೈ ಅವರು ಇದೀಗ ಬಡ ಜನರ ಸೇವೆಗೆ ಮತ್ತೊಂದು ಹೆಜ್ಜೆ ಇಟ್ಟಿದ್ದಾರೆ.
ರಾಜ್ಯ ಸರಕಾರ ಬಡ ಅಟೋ ಹಾಗೂ ಟ್ಯಾಕ್ಸಿ ಚಾಲಕರ ಹಿತಕ್ಕಾಗಿ ಘೋಷಿಸಿರುವ ಪರಿಹಾರ ಮೊತ್ತಕ್ಕಾಗಿ ಆನ್ ಲೈನ್ ನೋಂದಣಿ ಹಾಗೂ ಮಾಹಿತಿಯನ್ನು ರಮಾನಾಥ ರೈ ಅಧ್ಯಕ್ಷರಾಗಿರುವ ಬಂಟ್ವಾಳ ಕ್ರೆಡಿಟ್ ಕೊ ಆಪರೇಟಿವ್ ಬ್ಯಾಂಕಿನಲ್ಲಿ ನೀಡಲಾಗುವುದು.
ಈ ಬಗ್ಗೆ ಮಾಹಿತಿ ಹಾಗೂ ಉಚಿತ ನೋಂದಣಿಗಾಗಿ ಅಟೋ ಹಾಗೂ ಟ್ಯಾಕ್ಸಿ ಚಾಲಕರು ಬಿ ಸಿ ರೋಡಿನ ಹೋಟೆಲ್ ರಂಗೋಲಿ ಸಮೀಪದ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಕಛೇರಿಯ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿರುವ ಬ್ಯಾಂಕಿನ ಪ್ರಧಾನ ಕಛೇರಿಗೆ ಭೇಟಿ ನೀಡಿ ಉಚಿತ ಸೇವೆಯನ್ನು ಪಡೆದುಕೊಳ್ಳಬಹುದು ಎಂದು ಬ್ಯಾಂಕಿನ ಸಿಇಒ ಬೇಬಿ ಕುಂದರ್ ತಿಳಿಸಿದ್ದಾರೆ.
0 comments:
Post a Comment