ನವದೆಹಲಿ (ಕರಾವಳಿ ಟೈಮ್ಸ್) : ಝೀ ಮೀಡಿಯಾದ 28 ಮಂದಿ ಉದ್ಯೋಗಿಗಳಲ್ಲಿ ಕೊರೋನಾ ಸೋಂಕು ದೃಢಪಟ್ಟಿರುವುದರಿಂದ ಮೀಡಿಯಾ ಕಚೇರಿ, ನ್ಯೂಸ್ ರೂಮ್ ಮತ್ತು ಸ್ಟುಡಿಯೋಗಳನ್ನು ಸೀಲ್‍ಡೌನ್ ಮಾಡಲಾಗಿದೆ ಎಂದು ಮೀಡಿಯಾ ಪ್ರಕಟಣೆ ಹೇಳಿಕೊಂಡಿದೆ.
ಜಾಗತಿಕ ಸಂಕಾಗಿ ಪರಿಣಮಿಸಿರುವ ಕೊರೋನಾ ಮೀಡಿಯಾ ಸಂಸ್ಥೆಯೊಂದರ ದೊಡ್ಡ ಸಂಖ್ಯೆಯ ಉದ್ಯೋಗಿಗಳನ್ನು ಕಾಡಿದೆ. ಕಳೆದ ಶುಕ್ರವಾರ, ನಮ್ಮ ಸಹೋದ್ಯೋಗಿಯೊಬ್ಬರು ಕೋವಿಡ್-19 ಸೋಂಕಿಗೆ ತುತ್ತಾಗಿದ್ದರು. ಜವಾಬ್ದಾರಿಯುತ ಸಂಘಟನೆಯಾಗಿ, ನಾವು ನೇರ ಅಥವಾ ಪರೋಕ್ಷ ಸಂಪರ್ಕದಲ್ಲಿರಬಹುದಾದ ಎಲ್ಲರ ಸಾಮೂಹಿಕ ಪರೀಕ್ಷೆಯನ್ನು ಪ್ರಾರಂಭಿಸಿದ್ದೇವೆ ಎಂಬುದಾಗಿ ಮೀಡಿಯಾ ಸಂಸ್ಥೆಯ ಪ್ರಧಾನ ಸಂಪಾದಕ ಸುಧೀರ್ ಚೌಧರಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇದುವರೆಗೆ ನಮ್ಮ ಸಂಸ್ಥೆಯ 28 ಮಂದಿಗೆ ಕೊರೋನಾ ಇರುವುದು ದೃಢವಾಗಿದೆ. ಅದೃಷ್ಟವಶಾತ್, ಅವರಲ್ಲಿ ಹೆಚ್ಚಿನವರಿಗೆ ಯಾವ ರೋಗ ಲಕ್ಷಣಗಳೂ ಇಲ್ಲ. ಇದು ಆರಂಭಿಕ ರೋಗ ನಿರ್ಣಯ ಮತ್ತು ಪೆÇ್ರ ಆಕ್ಟಿವ್ ಇಂಟರ್ವೇಷನ್ ಎಂದು ನಾನು ಭಾವಿಸುತ್ತೇನೆ. ಎಲ್ಲಾ ಸರಕಾರಿ ಮತ್ತು ಆರೋಗ್ಯಾಧಿಕಾರಿಗಳ ಸಮನ್ವಯದೊಂದಿಗೆ ನಾವು ಈ ಕೊಂಡಿಯನ್ನು ಮುರಿಯಲು ಸೋಂಕನ್ನು ದೂರವಾಗಿಸಲು ಉತ್ತಮ ಮಾರ್ಗಗಳನ್ನು ಅನುಸರಿಸುತ್ತಿದ್ದೇವೆ. ಎಲ್ಲಾ ಆರೋಗ್ಯ ಪೆÇ್ರೀಟೋಕಾಲ್‍ಗಳು ಮತ್ತು ಅಧಿಕೃತ ಮಾರ್ಗಸೂಚಿಗಳನ್ನು ಅನುಸರಿಸಲಾಗುತ್ತಿದೆ ಎಂದು ಚೌಧರಿ ಹೇಳಿದ್ದಾರೆ.
ನಮ್ಮ ಕಚೇರಿ, ನ್ಯೂಸ್ ರೂಮ್ ಮತ್ತು ಸ್ಟುಡಿಯೋಗಳನ್ನು ನೈರ್ಮಲ್ಯೀಕರಣಕ್ಕಾಗಿ ಸೀಲ್‍ಡೌನ್ ಮಾಡಲಾಗಿದೆ. ಝೀ ನ್ಯೂಸ್ ತಂಡವನ್ನು ಸದ್ಯಕ್ಕೆ ಪರ್ಯಾಯ ಸೌಲಭ್ಯಕ್ಕೆ ಸ್ಥಳಾಂತರಿಸಲಾಗಿದೆ ಎಂದು ಅವರು ಹೇಳಿದರು. ಉಳಿದ ನೌಕರರ ಪರೀಕ್ಷೆ ಮುಂದುವರಿಯುತ್ತಿದೆ. ಕೋವಿಡ್-19 ಧನಾತ್ಮಕ ಮತ್ತು ರೋಗದ ವಾಹಕಗಳಾಗಿರಬಹುದಾದ ಲಕ್ಷಣ ರಹಿತ ವ್ಯಕ್ತಿಗಳನ್ನು ಪರೀಕ್ಷಿಸಲು ಐಸಿಎಂಆರ್ ಸಹ ತನ್ನ ಪರೀಕ್ಷಾ ಮಾನದಂಡಗಳನ್ನು ಸಡಿಲಗೊಳಿಸಿದೆ. ಇದು ಹೆಚ್ಚಿನ ಸಂಖ್ಯೆಯ ಕೋವಿಡ್-19 ಪ್ರಕರಣಗಳನ್ನು ಗುರುತಿಸಲು, ಪ್ರತ್ಯೇಕಿಸಲು ಮತ್ತು ಚಿಕಿತ್ಸೆ ನೀಡಲು ನೆರವಾಗಲಿದೆ. ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಇದು ಅತ್ಯುತ್ತಮ ಮಾರ್ಗವೆಂದು ನಾವು ನಂಬುತ್ತೇವೆ ಎಂದು ಚೌಧರಿ ಹೇಳಿದ್ದಾರೆ.
ಝೀ ಮೀಡಿಯಾ ಕಾಪೆರ್Çರೇಶನ್ ಲಿಮಿಟೆಡ್ 2,500 ಉದ್ಯೋಗಿಗಳನ್ನು ಹೊಂದಿದೆ, ಇದು ಖಾಸಗಿ ವಲಯದಲ್ಲಿ ಅತಿ ದೊಡ್ಡ ಮೀಡಿಯಾ ಸಂಸ್ಥೆಯಾಗಿದೆ. ಪ್ರತಿಯೊಬ್ಬರ ಸುರಕ್ಷತೆಗೆ ನಾವು ಬದ್ಧರಾಗಿದ್ದೇವೆ ಎಂದು ಹೇಳಿಕೆ ತಿಳಿಸಿದೆ.
Zee media ge corona supersub marna chai hey harami log
ReplyDelete