ಬೆಂಗಳೂರು (ಕರಾವಳಿ ಟೈಮ್ಸ್) : ದೇಶಾದ್ಯಂತ ಲಾಕ್‍ಡೌನ್ ಮೇ 31 ರವರೆಗೆ ಜಾರಿಯಲ್ಲಿರುವುದರಿದ ಮುಸ್ಲಿಂ ಬಾಂಧವರ ಪವಿತ್ರ ರಂಝಾನ್ ಹಬ್ಬಕ್ಕೆ ಮಸೀದಿ ಹಾಗೂ ಈದ್ಗಾಗಳಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಸದೆ ಸರಕಾರದ ಆದೇಶ ಪಾಲಿಸುವಂತೆ ರಾಜ್ಯ ವಕ್ಫ್ ಬೋರ್ಡ್ ಆದೇಶ ನೀಡಿದೆ.
ವಕ್ಫ್ ಬೋರ್ಡ್ ಆದೇಶವು ರಂಝಾನ್ ಕೊನೆಯ ಭಾಗದ ಸಾಮೂಹಿಕ ಪ್ರಾರ್ಥನೆ, ಶುಕ್ರವಾರದ ಸಾಮೂಹಿಕ ಪ್ರಾರ್ಥನೆ ಸೇರಿದಂತೆ ಈದುಲ್ ಫಿತ್ರ್ ಸಾಮೂಹಿಕ ಪ್ರಾರ್ಥನೆಗಳಿಗೂ ಅನ್ವಯವಾಗಲಿದೆ ಎಂದು ವಕ್ಫ್ ಬೋರ್ಡ್ ಸಿಇಒ ಇಸ್ಲಾವುದ್ದೀನ್ ಗದ್ಯಾಳ ತಿಳಿಸಿದ್ದಾರೆ.
ಈದುಲ್ ಫಿತ್ರ್ ದಿನದಂದು ವಿಶೇಷ ಮುನ್ನೆಚ್ಚರಿಕೆ ವಹಿಸಲು ಮುಸ್ಲಿಮ್ ಬಾಂಧವರಿಗೆ ಸೂಚನೆ ನೀಡಲಾಗಿದೆ. ಹಬ್ಬದ ದಿನ ಸಾಮಾಜಿಕ ಅಂತರ ಪಾಲನೆ ಮಾಡಬೇಕು. ಮುಸ್ಲಿಂ ಬಾಂಧವರು ಪರಸ್ಪರ ಹಸ್ತ ಲಾಘವ ಮಾಡುವುದು, ಆಲಿಂಗನ ಮಾಡುವ ಮೂಲಕ ಶುಭಾಶಯ ಕೋರುವುದಕ್ಕೂ ನಿರ್ಬಂಧ ಹೇರಲಾಗಿದೆ.
ಸ್ನೇಹಿತರನ್ನು, ಬಂಧು-ಬಳಗವನ್ನು ಮನೆಗೆ ಕರೆಯುವುದು, ಅಥವಾ ಅವರ ಮನೆಗಳಿಗೆ ತೆರಳುವುದು, ಕುಟುಂಬ ಸಮೇತ ಸುತ್ತಾಡಲು ಹೊರಗೆ ಹೋಗುವುದು ಮೊದಲಾದ ಎಲ್ಲ ಪ್ರಕ್ರಿಯೆಗಳನ್ನು ನಿಷೇಧಿಸಿ ಆದೇಶ ನೀಡಲಾಗಿದೆ.
0 comments:
Post a Comment