ಮಂಗಳೂರು (ಕರಾವಳಿ ಟೈಮ್ಸ್) : ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ 55 ನೇ ಹುಟ್ಟುಹಬ್ಬದ ಪ್ರಯುಕ್ತ ದ.ಕ. ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಗುರುವಾರ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. ಶಿಬಿರವು ಕೋವಿಡ್-19 ನಿಯಮಗಳ ಪಾಲನೆಯೊಂದಿಗೆ ಕಂಕನಾಡಿಯ ಹೈಲಾಂಡ್ ಆಸ್ಪತ್ರೆ ಸಮೀಪದ ಜನತಾ ಲಂಚ್ ಹೊಂನಲ್ಲಿ ನಡೆಯಿತು. ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ದೀಪ ಬೆಳಗಿಸುವ ಮೂಲಕ ಶಿಬಿರವನ್ನು ಉದ್ಘಾಟಿಸಿದರು. ಸುಮಾರು ನೂರರಷ್ಟು ಕಾರ್ಯಕರ್ತರು ಈ ಸಂದರ್ಭ ರಕ್ತದಾನ ಮಾಡಿದರು.
ಮಾಜಿ ಸಚಿವ ಬಿ.ರಮನಾಥ ರೈ, ಶಾಸಕರಾದ ಯು ಟಿ ಖಾದರ್, ಐವನ್ ಡಿ’ಸೋಜ, ಮಾಜಿ ಶಾಸಕ ಜೆ.ಆರ್. ಲೋಬೊ, ಮನಪಾ ಸದಸ್ಯರಾದ ಪ್ರವೀಣ್‍ಚಂದ್ರ ಆಳ್ವ, ಎ ಸಿ ವಿನಯರಾಜ್, ನವೀನ್ ಡಿ’ಸೋಜ, ರವೂಫ್ ಬಜಾಲ್, ಬಂಟ್ವಾಳ ತಾಲೂಕು ಪಂಚಾಯತ್ ಉಪಾಧ್ಯಕ್ಷ ಬಿ.ಎಂ. ಅಬ್ಬಾಸ್ ಅಲಿ, ಯುವ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಸುಹೈಲ್ ಕಂದಕ್, ಪುದು ಗ್ರಾಮ ಪಂಚಾಯತ್ ಸದಸ್ಯ ಹಾಗೂ ಮಂಗಳೂರು ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಶೀರ್ ಪೇರಿಮಾರ್, ರೆಡ್ ಕ್ರಾಸ್ ಸಂಸ್ಥೆಯ ಪ್ರವೀಣ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಂತಲಾ ಗಟ್ಟಿ, ಯುವ ಕಾಂಗ್ರೆಸ್ ವಿಧಾನಸಭಾಧ್ಯಕ್ಷ ಮೆರಿಲ್ ರೇಗೊ, ಪ್ರಮುಖರಾದ ಗಿರೀಶ್ ಆಳ್ವ, ಯು.ಟಿ. ತೌಸಿಫ್, ಅಭಿನಂದನ್, ಶಬೀರ್ ಕೆಂಪಿ, ಬಶೀರ್ ಪರ್ಲಡ್ಕ, ಅಶ್ರಫ್ (ಅಪ್ಪು) ಅಡ್ಯಾರ್, ರೂಪೇಶ್, ಅನ್ಸಾರುದ್ದೀನ್ ಸಾಲ್ಮರ, ಸವಾದ್ ಸುಳ್ಯ, ಸಾದಿಕ್ ಬರೆಪ್ಪಾಡಿ, ರಿಲ್ವಾನ್ ಫರಂಗಿಪೇಟೆ, ಶಾಹೀಲ್ ಆರ್.ಎಸ್ ಫರಂಗಿಪೇಟೆ, ಆಪ್ರೀದ್ ಫರಂಗಿಪೇಟೆ, ವಿವಿಯನ್ ಡಿ’ಸೋಜ ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು.
0 comments:
Post a Comment