ಉಪ್ಪಿನಂಗಡಿ (ಕರಾವಳಿ ಟೈಮ್ಸ್) : ವಿದ್ಯುತ್ ಅಡಚಣೆ ಸರಿಪಡಿಸಲು ತೆರಳಿದ್ದ ವೇಳೆ ಕರ್ತವ್ಯನಿರತ ಮೆಸ್ಕಾಂ ಪವರ್‍ಮೆನ್‍ಗಳ ಮೇಲೆ ಹಲ್ಲೆ ನಡೆಸಿ, ಜೀವಬೆದರಿಕೆ ಒಡ್ಡಿದ ಘಟನೆ ನೆಲ್ಯಾಡಿ ಮೆಸ್ಕಾಂ ಶಾಖಾ ವ್ಯಾಪ್ತಿಯಲ್ಲಿ ಗುರುವಾರ ನಡೆದಿದ್ದು, ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ. ಈ ಸಂಬಂಧ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಂiÀiನ್ನು ಬಂಧಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.
ನೆಲ್ಯಾಡಿ ಮೆಸ್ಕಾಂ ಶಾಖೆಯಲ್ಲಿ ಕಿರಿಯ ಪವರ್ ಮೆನ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಶರಣಪ್ಪ ಛಲವಾದಿ ಎಂಬವರು ಕಡಬ ತಾಲೂಕು ಇಚಲಂಪಾಡಿ ಗ್ರಾಮದ ಕೊರಮೇರು ಎಂಬಲ್ಲಿ ವಿದ್ಯುತ್ ಸರಬರಾಜಿನಲ್ಲಿ ಗುರುವಾರ ಅಡಚಣೆಯಾದ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಕಿರಿಯ ಪವರ್ ಮೆನ್ ಆನಂದ ಜಿ ಲಮಾಣಿ ಎಂಬವರೊಂದಿಗೆ ಸ್ಥಳಕ್ಕೆ ತೆರಳಿದ್ದ ವೇಳೆ ಕಡಬ ಇಚಿಲಂಪಾಡಿ ಗ್ರಾಮದ ನಿವಾಸಿ ಶಿಬು ವರ್ಗೀಸ್ (43) ಎಂಬವರಲ್ಲಿ ಅವರ ಇನ್‍ವರ್ಟರ್ ಆಫ್ ಮಾಡಲು ವಿನಂತಿಸಿಕೊಂಡಾಗ ಆರೋಪಿ ಶಿಬು ವರ್ಗೀಸ್ ಸಮವಸ್ತ್ರದಲ್ಲಿದ್ದ ಶರಣಪ್ಪ ಛಲವಾದಿ ಮತ್ತು ಆನಂದ ಜಿ ಲಮಾಣಿ ಅವರಿಗೆ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿರುತ್ತಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
ಈ ಬಗ್ಗೆ ಉಪ್ಪಿನಂಗಡಿ ಪೆÇಲೀಸ್ ಠಾಣಾ ಅಪರಾಧ ಕ್ರಮಾಂಕ 52/2020 ಕಲಂ : 323, 504, 506, 353 ಭಾರತೀಯ ದಂಡ ಸಂಹಿತೆಯಂತೆ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ದಸ್ತಗಿರಿ ಮಾಡಲಾಗಿದ್ದು ತನಿಖೆ ಪ್ರಗತಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
0 comments:
Post a Comment