ಗ್ರೀನ್ ಝೋನ್ ನಲ್ಲಿದ್ದ ಉಡುಪಿ ಜಿಲ್ಲೆಯಲ್ಲಿ ಮಾರಕ ವೈರಸ್ ಗೆ ಮೊದಲ ಬಲಿ
ಉಡುಪಿ (ಕರಾವಳಿ ಟೈಮ್ಸ್) : ಮುಂಬೈನಿಂದ ಬಂದು ಮಣಿಪಾಲ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ ವ್ಯಕ್ತಿಗೆ ಕೊರೊನಾ ಸೋಂಕು ಇರುವುದು ಇಂದು ದೃಢಪಟ್ಟಿದೆ. ವ್ಯಕ್ತಿಯ ಗಂಟಲ ದ್ರವ ಪರೀಕ್ಷೆಯ ವರದಿ ಇಂದು ಸಂಜೆ ಬಂದಿದ್ದು, ವರದಿಯಲ್ಲಿ ಕೊರೋನಾ ಪಾಸಿಟಿವ್ ಎಂದು ದೃಢಪಟ್ಟಿದೆ.
ಸಾವನ್ನಪ್ಪಿದ 54 ವರ್ಷದ ಸೋಂಕಿತ ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ನಿವಾಸಿಯಾಗಿದ್ದು, ಮೇ 13 ರಂದು ಹೃದಯಾಘಾತವಾಗಿತ್ತು. ಆರಂಭದಲ್ಲಿ ಕುಂದಾಪುರ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ನೋವು ಉಲ್ಬಣಗೊಂಡು ಮಣಿಪಾಲ ಕೆಎಂಸಿಗೆ ಶಿಫ್ಟ್ ಮಾಡಲಾಗಿತ್ತು. ಮೇ 13ರ ರಾತ್ರಿಯೇ ವೈದ್ಯರು ಶಸ್ತ್ರಚಿಕಿತ್ಸೆ ಮಾಡಿದ್ದರು. ಮೇ 14ರ ಬೆಳಗ್ಗೆ ವ್ಯಕ್ತಿ ನಿಧನರಾಗಿದ್ದರು.
ವ್ಯಕ್ತಿ ಮುಂಬೈನಿಂದ ಬಂದ ಹಿನ್ನೆಲೆಯಲ್ಲಿ ವೈದ್ಯರು ಕೊರೊನಾ ಸೋಂಕಿನ ಶಂಕೆಯಿಂದ ಗಂಟಲಿನ ದ್ರವ ಮಾದರಿಯನ್ನು ಪಡೆದು ಪರೀಕ್ಷೆಗೆ ಕಳುಹಿಸಿದ್ದರು. ಇಂದು ವರದಿ ಬಂದಿದ್ದು, ಕೊರೊನಾ ಸೋಂಕು ತಗುಲಿರುವುದು ದೃಢವಾಗಿದೆ. ಸದ್ಯ ವ್ಯಕ್ತಿಗೆ ಚಿಕಿತ್ಸೆ ನೀಡಿದ ಕೆಎಂಸಿಯ ಕೆಲ ವೈದ್ಯರು ಮತ್ತು ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ ಎಂದು ಮಣಿಪಾಲ ಕೆಎಂಸಿ ವೈದ್ಯಕೀಯ ಅಧೀಕ್ಷಕರು ಮಾಹಿತಿ ನೀಡಿದ್ದಾರೆ.
0 comments:
Post a Comment