ಕೊರೊನಾ ವಾರಿಯರ್ಸ್‍ಗಳಿಗೇ ಸಂಬಳ ನೀಡದ ಸರಕಾರ ಇನ್ನು ರೋಗಿಗಳ ಹೇಗೆ ನೋಡುಕೊಳ್ಳಬಹುದು : ಶಾಸಕ ಖಾದರ್ ಪ್ರಶ್ನೆ - Karavali Times ಕೊರೊನಾ ವಾರಿಯರ್ಸ್‍ಗಳಿಗೇ ಸಂಬಳ ನೀಡದ ಸರಕಾರ ಇನ್ನು ರೋಗಿಗಳ ಹೇಗೆ ನೋಡುಕೊಳ್ಳಬಹುದು : ಶಾಸಕ ಖಾದರ್ ಪ್ರಶ್ನೆ - Karavali Times

728x90

30 May 2020

ಕೊರೊನಾ ವಾರಿಯರ್ಸ್‍ಗಳಿಗೇ ಸಂಬಳ ನೀಡದ ಸರಕಾರ ಇನ್ನು ರೋಗಿಗಳ ಹೇಗೆ ನೋಡುಕೊಳ್ಳಬಹುದು : ಶಾಸಕ ಖಾದರ್ ಪ್ರಶ್ನೆ



ಮಂಗಳೂರು (ಕರಾವಳಿ ಟೈಮ್ಸ್) : ಕೊರೊನಾ ವಾರಿಯರ್ಸ್‍ಗಳಿಗೆ ಸಂಬಳ ನೀಡದೆ ಸರಕಾರ ನಿರ್ಲಕ್ಷಿಸಿದೆ. ವಾರಿಯರ್‍ಗಳಿಗೇ ಸಂಬಳ ನೀಡಿಲ್ಲ. ಇನ್ನು ರಾಜ್ಯದಲ್ಲಿ ಕೊರೋನಾ ರೋಗಿಗಳ ಸ್ಥಿತಿ ಹೇಗಿರಬಹುದು ಎಂದು ಮಾಜಿ ಸಚಿವ, ಮಂಗಳೂರು ಶಾಸಕ ಯು.ಟಿ. ಖಾದರ್ ಪ್ರಶ್ನಿಸಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೈದ್ಯರು ಹಾಗೂ ನರ್ಸ್‍ಗಳಿಗೆ ಎರಡು ತಿಂಗಳಿನಿಂದ ಸಂಬಳ ಆಗಿಲ್ಲ. ಕೊರೊನಾ ಸಂದರ್ಭದಲ್ಲೇ ವೇತನ ನೀಡದೆ ಸರಕಾರ ಸತಾಯಿಸುವುದು ಸರಿಯಲ್ಲ. ತಕ್ಷಣ ಸಂಬಳ ಬಿಡುಗಡೆ ಮಾಡುವಂತೆ ಸರಕಾರವನ್ನು ಆಗ್ರಹಿಸಿದ್ದಾರೆ.

    ನ್ಯಾಷನಲ್ ಹೆಲ್ತ್ ಮಿಷನ್ ಅಡಿಯಲ್ಲಿ ಬರುವ ವೈದ್ಯರು, ನರ್ಸ್, ಲ್ಯಾಬ್ ಟೆಕ್ನಿಷಿಯನ್ಸ್‍ಗೂ ಸಂಬಳ ಆಗಿಲ್ಲ. ಅಂದರೆ ರಾಜ್ಯದಲ್ಲಿ ಒಟ್ಟು 26 ಸಾವಿರ ಮಂದಿಗೆ ಸರಕಾರ ಸಂಬಳ ನೀಡಿಲ್ಲ. ಎರಡು ತಿಂಗಳು ಬಿಡುವಿಲ್ಲದೆ ವೈದ್ಯರು ಕೆಲಸ ಮಾಡಿದ್ದಾರೆ. ಪಿಎಂ ಕೇರ್‍ನಲ್ಲಿ ಸಂಗ್ರಹವಾದ ಹಣವನ್ನು ನೀಡಲಿ. ಜೊತೆಗೆ ಪಿಎಂ ಫಂಡ್‍ನಲ್ಲಿ ಸಂಗ್ರಹವಾದ ಹಣದ ಲೆಕ್ಕವನ್ನೂ ಕೊಡಿ. ಯಾವುದಕ್ಕೆ ಖರ್ಚು ಮಾಡಿದ್ದಾರೆ ಎಂದು ಬಹಿರಂಗಪಡಿಸಲಿ ಎಂದವರು ಆಗ್ರಹಿಸಿದರು.

    ಸರಕಾರ ತಕ್ಷಣ ವೈದ್ಯರಿಗೆ ಸಂಬಳ ನೀಡದಿದ್ದರೆ ಕಾಂಗ್ರೆಸ್ ಪಕ್ಷದ ವತಿಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಶಾಸಕ ಯು.ಟಿ. ಖಾದರ್ ಎಚ್ಚರಿಸಿದರು.
  • Blogger Comments
  • Facebook Comments

0 comments:

Post a Comment

Item Reviewed: ಕೊರೊನಾ ವಾರಿಯರ್ಸ್‍ಗಳಿಗೇ ಸಂಬಳ ನೀಡದ ಸರಕಾರ ಇನ್ನು ರೋಗಿಗಳ ಹೇಗೆ ನೋಡುಕೊಳ್ಳಬಹುದು : ಶಾಸಕ ಖಾದರ್ ಪ್ರಶ್ನೆ Rating: 5 Reviewed By: karavali Times
Scroll to Top