ಬಂಟ್ವಾಳ (ಕರಾವಳಿ ಟೈಮ್ಸ್) : ಬಂಟ್ವಾಳ ಬಂಟರ ಭವನದಲ್ಲಿ ಕಳೆದ ಎರಡು ದಿನಗಳಿಂದ ಬೀಡುಬಿಟ್ಟಿರುವ ಜಾರ್ಖಂಡ್ ಮೂಲದ ಸುಮಾರು 1200 ವಲಸೆ ಕಾರ್ಮಿಕರಿಗೆ ಗುರುವಾರ ರಾತ್ರಿ ಹಾಗೂ ಶುಕ್ರವಾರ ಬೆಳಿಗ್ಗೆ ಮಂಗಳೂರು ಶಾಸಕ ಯು ಟಿ ಖಾದರ್ ನೇತೃತ್ವದಲ್ಲಿ ಕಿನ್ಸ್ ಫೌಂಡೇಶನ್ ಸಂಸ್ಥೆಯ ಅಲ್ತಾಫ್ ಉಳ್ಳಾಲ ಅವರ ಸಹಕಾರದೊಂದಿಗೆ ಆಹಾರ ಮತ್ತು ಉಪಹಾರವನ್ನು ಒದಗಿಸಿ ಉಪಚರಿಸಲಾಯಿತು.
ಸ್ವತಃ ಮಂಗಳೂರು ಶಾಸಕ ಯು ಟಿ ಖಾದರ್ ಹಾಗೂ ಬಂಟ್ವಾಳ ಶಾಸಕ ಯು ರಾಜೇಶ್ ನಾಯಕ್ ಅವರು ಉಪಸ್ಥಿತರಿದ್ದು, ವಲಸೆ ಕಾರ್ಮಿಕರಿಗೆ ಉಪಹಾರ ವಿತರಿಸಿದರು. ಬಂಟ್ವಾಳ ತಾಲೂಕು ತಹಶೀಲ್ದಾರ್ ರಶ್ಮಿ ಎಸ್ ಆರ್, ಬಂಟ್ವಾಳ ಗ್ರಾಮಾಂತರ ಠಾಣಾ ಎಸ್ಸೈ ಪ್ರಸನ್ನ, ಬಂಟ್ವಾಳ ನಗರ ಠಾಣಾ ಎಸ್ಸೈ ಅವಿನಾಶ್ ಸ್ಥಳದಲ್ಲಿದ್ದರು.
ಈ ಸಂದರ್ಭ ಜಿ.ಪಂ. ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಮಾಜಿ ಸದಸ್ಯ ಉಮರ್ ಫಾರೂಕ್ ಫರಂಗಿಪೇಟೆ, ಪುದು ಗ್ರಾಮ ಪಂಚಾಯತ್ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ, ಪುದು ವಲಯ ಕಾಂಗ್ರೆಸ್ ಅಧ್ಯಕ್ಷ ರಫೀಕ್ ಪೇರಿಮಾರ್, ಮುಡಿಪು ಬ್ಲಾಕ್ ಅಧ್ಯಕ್ಷ ಇಂತಿಯಾಝ್ ತುಂಬೆ, ಪುದು ಗ್ರಾಮ ಪಂಚಾಯತ್ ಸದಸ್ಯರಾದ ಇಕ್ಬಾಲ್ ಸುಜೀರ್, ಝಹೀರ್ ಕುಂಪನಮಜಲ್, ರಿಯಾಝ್ ಕುಂಪನಮಜಲ್, ಮಹಮ್ಮದ್ ಮೋನು ಫರಂಗಿಪೇಟೆ, ಲತೀಫ್ ಅರಫ, ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶೌಕತ್ ಅಲಿ ಪಾಡಿ, ಯುವ ಕಾಂಗ್ರೆಸ್ ಸದಸ್ಯರಾದ ಮಜೀದ್ ಪೇರಿಮರ್, ಇಸ್ಮಾಯಿಲ್ ಕುಂಜತ್ಕಲ್, ಅಶ್ವದ್ ಫರಂಗಿಪೇಟೆ, ಆಶಿಂ ಮಾರಿಪಳ್ಳ, ಝಹೀರ್ ಮಾರಿಪಳ್ಳ, ಅಶ್ರಫ್ ಮಲ್ಲಿ, ಇಮ್ರಾನ್ ಮಾರಿಪಳ್ಳ, ಪ್ರಮುಖರಾದ ಪ್ರಕಾಶ್ ಶೆಟ್ಟಿ ತುಂಬೆ, ಕಾಸಿಂ ಶಾಂತಿಅಂಗಡಿ ಮೊದಲಾದವರು ಉಪಸ್ಥಿತರಿದ್ದರು.
0 comments:
Post a Comment