ಅಂತರ್ ಜಿಲ್ಲಾ ಪ್ರಯಾಣಕ್ಕಿನ್ನು ಟೂವೇ ಪಾಸ್ - Karavali Times ಅಂತರ್ ಜಿಲ್ಲಾ ಪ್ರಯಾಣಕ್ಕಿನ್ನು ಟೂವೇ ಪಾಸ್ - Karavali Times

728x90

5 May 2020

ಅಂತರ್ ಜಿಲ್ಲಾ ಪ್ರಯಾಣಕ್ಕಿನ್ನು ಟೂವೇ ಪಾಸ್


ಬೆಂಗಳೂರು (ಕರಾವಳಿ ಟೈಮ್ಸ್) : ರಾಜ್ಯದ ಅಂತರ್ ಜಿಲ್ಲೆಗಳಿಗೆ ಪ್ರಯಾಣಿಸಲು ನೀಡಲಾಗುತ್ತಿದ್ದ ಒನ್ ವೇ ಪಾಸ್ ಇದೀಗ ಟೂ ವೇ ಪಾಸ್ ಆಗಿ ನೀಡಲಾಗುತ್ತಿದೆ. ಇದರಿಂದ ಇನ್ನು ಮುಂದೆ ಕರ್ನಾಟಕದ ಜಿಲ್ಲೆಗಳಿಗೆ ಹೋಗಿ ಮರಳಿ ಬರಬಹುದು. 

“ಬೆಂಗಳೂರಿನಿಂದ ಕಾರ್ಮಿಕರಿಗೆ ಅವರ ಊರಿಗೆ ತೆರಳಲು ಉಚಿತ ಬಸ್ ವ್ಯವಸ್ಥೆ ಮಾಡಲಾಗಿದೆ. ಇದಕ್ಕೆ ನಮ್ಮ ವಿರೋಧವಿಲ್ಲ. ಆದರೆ ನಾವು ಕಳೆದ ಒಂದೂವರೆ ತಿಂಗಳಿನಿಂದ ಹಳ್ಳಿಯಲ್ಲಿದ್ದೇವೆ. ಬೆಂಗಳೂರಿಗೆ ಬರಲು ಬಸ್ ವ್ಯವಸ್ಥೆಯಿಲ್ಲ. ಖಾಸಗಿ ವಾಹನದ ವ್ಯವಸ್ಥೆ ಮಾಡಬೇಕಾದರೆ ಬೆಂಗಳೂರಿನಿಂದಲೇ ಮಾಡಬೇಕು. ಆದರೆ ಆ ವಾಹನ ಮರಳಿ ಬೆಂಗಳೂರಿಗೆ ಬರಲು ಸಾಧ್ಯವಿಲ್ಲ. ಹೀಗಾಗಿ ಖಾಸಗಿ ವಾಹನದಲ್ಲಿ ಒಂದು ಬಾರಿ ಹೋಗಲು ಮತ್ತು ಬರಲು ಪಾಸ್ ನೀಡಬೇಕು” ಎಂದು ಹಲವು ಮಂದಿ ಸಾಮಾಜಿಕ ಜಾಲತಾಣದಲ್ಲಿ ನೋವನ್ನು ತೋಡಿಕೊಂಡಿದ್ದರು. ಈ ಮನವಿಗೆ ಸರ್ಕಾರ ಸ್ಪಂದಿಸಿ ಹೋಗಿ, ಬರುವ ಪಾಸ್ ವಿತರಿಸಲು ತೀರ್ಮಾನಿಸಿದೆ.

ಏನು ಮಾಹಿತಿ ನೀಡಬೇಕು?

ಈ ಪಾಸ್ ಮೂಲಕ ನಿರ್ಬಂಧ ಇಲ್ಲದ ರಾಜ್ಯದ ಯಾವುದೇ ಭಾಗಗಳಿಗೆ ಹೋಗಿ ಬರಬಹುದಾಗಿದೆ. ವಾಹನದ ದಾಖಲೆ, ಈಗ ಇರುವ ಸ್ಥಳ, ತೆರಳುವ ಸ್ಥಳ, ಮೊಬೈಲ್ ಸಂಖ್ಯೆ, ವಾಹನ ಸಂಖ್ಯೆ, ವಾಹನದಲ್ಲಿ ಪ್ರಯಾಣಿಸುವ ವ್ಯಕ್ತಿಗಳ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿದ ಬಳಿಕ ಒಂದು ಕ್ಯೂಆರ್ ಕೋಡ್ ಬರುತ್ತದೆ. ಈ ಕ್ಯೂಆರ್ ಕೋಡ್ ಜೊತೆಗೆ ನೀವು ಸಲ್ಲಿಕೆ ಮಾಡಿದ ವಿವರಗಳಿರುವ ಇ-ಪಾಸ್ ಲಭ್ಯವಾಗುತ್ತದೆ. ಇದರ ಜೊತೆ ಯಾವ ಪೊಲೀಸರು ಈ ಪಾಸ್ ನೀಡಿದ್ದಾರೆ ಎಂಬ ವಿವರ ಇರುತ್ತದೆ.
ಪಾಸ್ ಪಡೆಯಲು ಕೆಳಗಿನ ಲಿಂಕ್  ಕ್ಲಿಕ್ ಮಾಡಿ:
 www://kspclearpass.idp.mygate.com/otp
  • Blogger Comments
  • Facebook Comments

0 comments:

Post a Comment

Item Reviewed: ಅಂತರ್ ಜಿಲ್ಲಾ ಪ್ರಯಾಣಕ್ಕಿನ್ನು ಟೂವೇ ಪಾಸ್ Rating: 5 Reviewed By: karavali Times
Scroll to Top