ಬೆಂಗಳೂರು (ಕರಾವಳಿ ಟೈಮ್ಸ್) : ರಾಜ್ಯದಲ್ಲಿ ಮಹಾಮಾರಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಶುಕ್ರವಾರ ಒಂದೇ ದಿನ 24 ಮಂದಿಗೆ ಪಾಸಿಟಿವ್ ದೃಢಪಟ್ಟಿದೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 589ಕ್ಕೆ ಏರಿಕೆಯಾಗಿದೆ.
ಇಂದು ಬೆಳಗ್ಗೆ 11 ಹೊಸ ಕೊವಿಡ್-19 ಪ್ರಕರಣ ಪತ್ತೆಯಾಗಿದ್ದು, ಸಂಜೆ ಮತ್ತೆ 13 ಮಂದಿಗೆ ಪಾಸಿಟಿವ್ ಬಂದಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
589 ಸೋಂಕಿತರ ಪೈಕಿ 23 ಮಂದಿ ಮೃತಪಟ್ಟಿದ್ದು, 251 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಂದು ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ ನಲ್ಲಿ ಈ ಮಾಹಿತಿ ನೀಡಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳದ 67 ವರ್ಷದ 409ನೇ ರೋಗಿ ಗುರುವಾರ ಚಿಕಿತ್ಸೆ ಫಲಿಸದೆ ನಿಧನರಾಗಿದ್ದಾರೆ. ಇವರು ಉಸಿರಾಟದ ತೊಂದರೆ ಮತ್ತು ದೀರ್ಘಕಾಲಿನ ಸಿಓಪಿಡಿ ಮತ್ತು ಮಧುಮೇಹ ಖಾಯಿಲೆಯಿಂದ ಬಳಲುತ್ತಿದ್ದರು ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಫಸ್ಟ್ ನ್ಯೂರೋ ಆಸ್ಪತ್ರೆಯ ಲಿಂಕ್ ಮುಂದುವರೆದಿದ್ದು, ಬೊಳೂರಿನ ವೃದ್ದ ಹಾಗೂ ಬಂಟ್ವಾಳ ಕಸಬಾ ಗ್ರಾಮದ ವೃದ್ದನಿಗೆ ಶುಕ್ರವಾರ ಕೊರೋನಾ ಪಾಸಿಟಿವ್ ದೃಢಪಟ್ಟಿದೆ.
ಮಂಡ್ಯ ಜಿಲ್ಲೆಯಲ್ಲಿ 8, ದಾವಣೆಗೆರೆ 6, ಬೆಳಗಾವಿ ಜಿಲ್ಲೆಯಲ್ಲಿ 3, ದಕ್ಷಿಣ ಕನ್ನಡ ಮತ್ತು ಕಲಬುರಗಿಯಲ್ಲಿ ತಲಾ 2 ಹಾಗೂ ಚಿಕ್ಕಬಳ್ಳಾಪುರ, ವಿಜಯಪುರ, ಧಾರವಾಡದಲ್ಲಿ ತಲಾ ಒಂದು ಪ್ರಕರಣಗಳು ಹೊಸದಾಗಿ ಪತ್ತೆಯಾಗಿವೆ.
ಮಂಡ್ಯದ 25 ವರ್ಷದ ಯುವಕ 566ನೇ ಸೋಂಕಿತನಾಗಿದ್ದು, ಮುಂಬೈ, ಮಹಾರಾಷ್ಟ್ರದ ಪ್ರಯಾಣದ ಹಿನ್ನೆಲೆಯಿದೆ. ಮಂಡ್ಯದ 24 ವರ್ಷದ ಯುವತಿ 567ನೇ ರೋಗಿಯಾಗಿದ್ದು, ಮುಂಬೈ, ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆಯಿದೆ. 568 ರೋಗಿ ಕೂಡಾ ಮಂಡ್ಯದ 27 ವರ್ಷದ ಯುವಕನಾಗಿದ್ದು, ಮಂಬೈ, ಮಹಾರಾಷ್ಟ್ರದ ಪ್ರಯಾಣದ ಹಿನ್ನೆಲೆಯಿದೆ.
569ನೇ ರೋಗಿ ಮಂಡ್ಯ ಜಿಲ್ಲೆ ಕೆ. ಆರ್. ಪೇಟೆಯ 30 ವರ್ಷದ ಮಹಿಳೆಯಾಗಿದ್ದಾರೆ. ಇವರು ರೋಗಿಗಳಾದ 566, 567 ಮತ್ತು 568ರೊಂದಿಗೆ ಸಂಪರ್ಕ ಹೊಂದಿರುತ್ತಾರೆ. 570, 571, 572 ಹಾಗೂ 573ನೇ ರೋಗಿಗಳು ಮಂಡ್ಯ ಜಿಲ್ಲೆ ಮಳವಳ್ಳಿವರಾಗಿದ್ದು, ಇವರೆಲ್ಲರೂ 179ನೇ ರೋಗಿಯೊಂದಿಗೆ ಸಂಪರ್ಕ ಹೊಂದಿದವರಾಗಿದ್ದಾರೆ.
574, 575 ಮತ್ತು 576ನೇ ರೋಗಿಗಳು ಬೆಳಗಾವಿ ಜಿಲ್ಲೆ ರಾಯಭಾಗದವರಾಗಿದ್ದು, 301ನೇ ರೋಗಿಯೊಂದಿಗೆ ದ್ವಿತೀಯ ಸಂಪರ್ಕ ಹೊಂದಿದವರಾಗಿದ್ದಾರೆ. ಇವರೆಲ್ಲರಿಗೂ ಜಿಲ್ಲಾ ಕೇಂದ್ರದ ನಿಗಧಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
0 comments:
Post a Comment