ಮೇ 20ರಿಂದ ಸಾರಿಗೆ, ಜೂನ್ 1 ರಿಂದ ಮಾಲ್-ಚಿತ್ರಮಂದಿರ ಸಾರ್ವಜನಿಕ‌ ಸೇವೆಗೆ?: ಸರಕಾರ ಚಿಂತನೆ - Karavali Times ಮೇ 20ರಿಂದ ಸಾರಿಗೆ, ಜೂನ್ 1 ರಿಂದ ಮಾಲ್-ಚಿತ್ರಮಂದಿರ ಸಾರ್ವಜನಿಕ‌ ಸೇವೆಗೆ?: ಸರಕಾರ ಚಿಂತನೆ - Karavali Times

728x90

4 May 2020

ಮೇ 20ರಿಂದ ಸಾರಿಗೆ, ಜೂನ್ 1 ರಿಂದ ಮಾಲ್-ಚಿತ್ರಮಂದಿರ ಸಾರ್ವಜನಿಕ‌ ಸೇವೆಗೆ?: ಸರಕಾರ ಚಿಂತನೆ

ಸಾಂದರ್ಭಿಕ ಚಿತ್ರ


ನವದೆಹಲಿ (ಕರಾವಳಿ ಟೈಮ್ಸ್) : ಕೊರೋನಾ ವೈರಸ್ ಲಾಕ್ ಡೌನ್ ಕಾರಣದಿಂದ ಸಮಸ್ಯೆಗಳಿಂದ ಹೊರಬರಲು ಮುಂದಿನ 2 ದಿನಗಳೊಳಗೆ ಕೇಂದ್ರ ಸರ್ಕಾರ ಎರಡನೇ ಹಣಕಾಸು ಪ್ರೋತ್ಸಾಹಕ ಪ್ಯಾಕೆಜ್ ಘೋಷಿಸುವ ಸಾಧ್ಯತೆಯಿದೆ.
ಇದಕ್ಕೆ ಸಂಬಂಧಪಟ್ಟಂತೆ ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಆರು ಸುತ್ತುಗಳ ಸಭೆ ನಡೆಸಿದ್ದು ಪ್ರಧಾನ ಮಂತ್ರಿ ಕಾರ್ಯಾಲಯ ಇಂದು ಕರಡು ಪ್ರಸ್ತಾವನೆ ಸಿದ್ದಪಡಿಸುವ ಸಾಧ್ಯತೆಯಿದೆ.

ಈ ಪ್ರಸ್ತಾವನೆಗೆ ಹಣಕಾಸು ಸಚಿವಾಲಯದ ಐವರು ಕಾರ್ಯದರ್ಶಿಗಳು ಅಂತಿಮ ಸ್ಪರ್ಶ ನೀಡಿದರೆ ಸರ್ಕಾರ ಪ್ರೋತ್ಸಾಹಕ ಹಣಕಾಸು ಪ್ಯಾಕೇಜ್ ನ್ನು ಇನ್ನು ಕೆಲ ದಿನಗಳಲ್ಲಿಯೇ ಘೋಷಿಸಲಿದೆ.
ಸರ್ಕಾರದ ಇನ್ನೊಂದು ಮೂಲದಿಂದ ಸಿಕ್ಕಿರುವ ಮಾಹಿತಿ ಪ್ರಕಾರ, ಕೋವಿಡ್-19 ನಿಯಮಗಳೊಂದಿಗೆ ಬಸ್ಸು, ಟ್ಯಾಕ್ಸಿ, ರೈಲು, ಆಟೋರಿಕ್ಷಾಗಳ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಮೇ 20ರಿಂದ ಮೆಟ್ರೊ ನಗರಗಳಲ್ಲಿ ಆರಂಭವಾಗಲಿದ್ದು ಜನರಿಗೆ ಈ ಸುದ್ದಿ ಸಮಾಧಾನ ತರಬಹುದು ಎಂದಿವೆ.
ಜೂನ್ 1ಕ್ಕೆ ಮಾಲ್ ಗಳ ತೆರೆಯುವಿಕೆ, ಸಾರ್ವಜನಿಕ ಸಭೆ, ಸಮಾರಂಭಗಳು, ವಿವಾಹ ಕಾರ್ಯಕ್ರಮಗಳು, ಸಿನೆಮಾ ಮಂದಿರಗಳು, ಧಾರ್ಮಿಕ ಕೇಂದ್ರಗಳ ತೆರೆಯುವಿಕೆಗೆ ಕೇಂದ್ರ ಸರ್ಕಾರ ಅವಕಾಶ ನೀಡಲಿದೆ. ಈ ಬಗ್ಗೆ ಗೃಹ ಸಚಿವಾಲಯ ರಾಜ್ಯ ಸರ್ಕಾರಗಳ ಜೊತೆ ಚರ್ಚೆ ನಡೆಸಿ ಅಂತಿಮಗೊಳಿಸುವ ಕಾರ್ಯ ನಡೆಸುತ್ತಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

  • Blogger Comments
  • Facebook Comments

0 comments:

Post a Comment

Item Reviewed: ಮೇ 20ರಿಂದ ಸಾರಿಗೆ, ಜೂನ್ 1 ರಿಂದ ಮಾಲ್-ಚಿತ್ರಮಂದಿರ ಸಾರ್ವಜನಿಕ‌ ಸೇವೆಗೆ?: ಸರಕಾರ ಚಿಂತನೆ Rating: 5 Reviewed By: karavali Times
Scroll to Top