ತುಮಕೂರು : ಹಿಂದೂ ವೃದ್ಧನ ಅಂತ್ಯಕ್ರಿಯೆಗೆ ಅಂಬುಲೆನ್ಸ್, ಧನ ಸಹಾಯ ನೀಡಿ ಸ್ಪಂದಿಸಿದ ಮುಸ್ಲಿಂ ಯುವಕರು - Karavali Times ತುಮಕೂರು : ಹಿಂದೂ ವೃದ್ಧನ ಅಂತ್ಯಕ್ರಿಯೆಗೆ ಅಂಬುಲೆನ್ಸ್, ಧನ ಸಹಾಯ ನೀಡಿ ಸ್ಪಂದಿಸಿದ ಮುಸ್ಲಿಂ ಯುವಕರು - Karavali Times

728x90

13 May 2020

ತುಮಕೂರು : ಹಿಂದೂ ವೃದ್ಧನ ಅಂತ್ಯಕ್ರಿಯೆಗೆ ಅಂಬುಲೆನ್ಸ್, ಧನ ಸಹಾಯ ನೀಡಿ ಸ್ಪಂದಿಸಿದ ಮುಸ್ಲಿಂ ಯುವಕರು

 

ಯುವಕರ ಕೆಲಸಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ


ತುಮಕೂರು (ಕರಾವಳಿ ಟೈಮ್ಸ್) : ವಿಶ್ವವನ್ನೇ ದಂಗಾಗಿಸಿರುವ ಮಾರಕ ಕಾಯಿಲೆ ಕೊರೊನಾ ವೈರಸ್, ಮಾನವ ಕುಲಕ್ಕೆ ಸವಾಲಾಗಿ ಪರಿಣಮಿಸಿದೆÉ. ಸೋಂಕಿನಿಂದ ಮೃತಪಟ್ಟವರು, ಕುಟುಂಬದ ಸದಸ್ಯರ ಬದಲು ಬೇರೆಯವರಿಂದ ಅಂತ್ಯಸಂಸ್ಕಾರ ಮಾಡಿಸಿಕೊಳ್ಳುತ್ತಿದ್ದಾರೆ. ಸಹಜ ಕಾರಣಗಳಿಂದಲೂ ಮೃತಪಟ್ಟವರ ಹತ್ತಿರ ಹೋಗುವುದಕ್ಕೂ ಜನ ಹಿಂದೆ ಮುಂದೆ ನೋಡುತ್ತಿದ್ದಾರೆ. ಇಂತಹ ಘಟನೆಯೊಂದು ತುಮಕೂರು ಜಿಲ್ಲೆಯ ಸೀಲ್‍ಡೌನ್ ಪ್ರದೇಶವಾಗಿರುವ ಕೆಎಚ್‍ಬಿ ಕಾಲೋನಿಯಲ್ಲಿ ನಡೆದಿದ್ದು, ಕೊನೆಗೆ ಅವರ ನೆರವಿಗೆ ಬಂದ ಸ್ಥಳೀಯ ಮುಸ್ಲಿಂ ಯುವಕರು ಮಾನವೀಯತೆ ಮೆರೆದಿದ್ದಾರೆ.

    ಕೊರೊನಾ ಸೋಂಕಿತ ರೋಗಿ-535 ವೃದ್ಧ ಸಾವನ್ನಪ್ಪಿದ್ದು, ಅವರಿಂದ ಪಕ್ಕದ ಮನೆಯ ದಂಪತಿಗೂ ಸೋಂಕು ತಗುಲಿತ್ತು. ಇದರಿಂದ ಕೆಎಚ್‍ಬಿ ಕಾಲೋನಿಯನ್ನು ಸೀಲ್‍ಡೌನ್ ಮಾಡಲಾಗಿದೆ. ಈ ಪ್ರದೇಶದಲ್ಲಿ ಮತ್ತೊಬ್ಬ ವೃದ್ಧರೊಬ್ಬರು ಅನಾರೋಗ್ಯದಿಂದ ಸಹಜವಾಗಿ ಸಾವನ್ನಪ್ಪಿದ್ದು, ಮುಸ್ಲಿಂ ಯುವಕರು ಅಂತ್ಯಕ್ರಿಯೆ ನೆರವೇರಿಸಲು ಸಹಾಯ ಮಾಡಿದ್ದಾರೆ.

    ನಗರದ ಎರಡನೇ ಕಂಟೈನ್ಮೆಂಟ್ ಝೋನ್ ಕೆಎಚ್‍ಬಿ ಕಾಲೋನಿಯಲ್ಲಿ ವಾಸವಿದ್ದ 60 ವರ್ಷದ ವೃದ್ಧ ಎಚ್.ಎಸ್. ನಾರಾಯಣ ರಾವ್ ಅನಾರೋಗ್ಯದಿಂದ ಕಳೆದ ರಾತ್ರಿ ಸಾವನ್ನಪ್ಪಿದ್ದರು. ಟೈಲರ್ ವೃತ್ತಿ ಮಾಡುತ್ತಿದ್ದ ಅವರಿಗೆ ಪತ್ನಿ, ಇಬ್ಬರು ಗಂಡು ಮಕ್ಕಳು, ಒಬ್ಬರು ಹೆಣ್ಣು ಮಗಳಿದ್ದು ಆರ್ಥಿಕವಾಗಿ ಸಂಕಷ್ಟದಲ್ಲಿದ್ದರು. ಮೊದಲೇ ಒಂದು ಕಾಲು ಕಳೆದುಕೊಂಡು ವಿಶೇಷ ಚೇತನರಾಗಿದ್ದ ವೃದ್ಧ ಅನಾರೋಗ್ಯದಿಂದ ಬಳಲುತ್ತಿದ್ದರು. ಕಳೆದ ನಾಲ್ಕು ದಿನಗಳ ಹಿಂದೆ ಅವರಿಗೆ ಕೊವಿಡ್-19 ಪರೀಕ್ಷೆ ಮಾಡಲಾಗಿದ್ದು, ರಿಪೆÇೀರ್ಟ್ ನೆಗೆಟಿವ್ ಬಂದಿತ್ತು.

    ವೃದ್ಧ ಸಾವನ್ನಪ್ಪಿದ ಸಂದರ್ಭದಲ್ಲಿ ಏರಿಯಾ ಸಂಪೂರ್ಣ ಸೀಲ್‍ಡೌನ್ ಆಗಿದ್ದರಿಂದ ಕುಟುಂಬದವರನ್ನು ಬಿಟ್ಟರೆ, ಸಂಬಂಧಿಕರು ಯಾರೂ ಸ್ಥಳಕ್ಕೆ ಹೋಗಲು ಸಾಧ್ಯವಾಗಲಿಲ್ಲ. ಹೀಗಾಗಿ ಅಂತ್ಯಸಂಸ್ಕಾರ ಮಾಡಲು ಪರದಾಡುತ್ತಿದ್ದ ಅವರನ್ನು ಕಂಡು ಕೊರೊನಾ ವಾರಿಯರ್ಸ್‍ಗಳಾದ ಮಹಮದ್ ಖಾಲಿದ್, ಇಮ್ರಾನ್, ಟಿಪ್ಪು, ಶೇರು, ಶಾರುಖ್, ತೋಫಿಕ್ ಸಾದ್, ಖತೀಬ್ ಹಾಗೂ ಮನ್ಸೂರ್ ಅಂತ್ಯಸಂಸ್ಕಾರಕ್ಕೆ ಜಿಲ್ಲಾಡಳಿತದ ಅನುಮತಿ ಪಡೆದು, ಅಂಬುಲೆನ್ಸ್ ವ್ಯವಸ್ಥೆಯ ಜೊತೆಗೆ ಧನ ಸಹಾಯವನ್ನು ಮಾಡಿದ್ದಾರೆ. ಈ ಮೂಲಕ ವೃದ್ಧನ ಮೃತದೇಹವನ್ನು ಚಿತಾಗಾರಕ್ಕೆ ಕಳುಹಿಸಿಕೊಟ್ಟಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮಾನವೀಯತೆ ಮೆರೆದ ಯುವಕರ ಕಾರ್ಯಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ.

    ಬಳಿಕ ಪತ್ನಿ ಹಾಗೂ ಮಕ್ಕಳು ಸೇರಿ ಗಾರ್ಡನ್ ಏರಿಯಾದಲ್ಲಿರುವ ಸರಕಾರಿ ವಿದ್ಯುತ್ ಚಿತಾಗಾರದಲ್ಲಿ ವೃದ್ಧನ ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ವೃದ್ಧನ ಅಂತ್ಯಕ್ರಿಯೆಗೆ ಸಹಕರಿಸಿದ ಕೊರೊನಾ ವಾರಿಯರ್ಸ್ ತಂಡಕ್ಕೆ ವೃದ್ಧನ ಕುಟುಂಬ ಕೃತಜ್ಞತೆ ಸಲ್ಲಿಸಿದೆ.
  • Blogger Comments
  • Facebook Comments

0 comments:

Post a Comment

Item Reviewed: ತುಮಕೂರು : ಹಿಂದೂ ವೃದ್ಧನ ಅಂತ್ಯಕ್ರಿಯೆಗೆ ಅಂಬುಲೆನ್ಸ್, ಧನ ಸಹಾಯ ನೀಡಿ ಸ್ಪಂದಿಸಿದ ಮುಸ್ಲಿಂ ಯುವಕರು Rating: 5 Reviewed By: karavali Times
Scroll to Top