ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ ಮಾಣಿ |
ನೈತಿಕ ಗೂಂಡಾಗಿರಿ ಮೆರೆಯುವ ದುಷ್ಕರ್ಮಿಗಳನ್ನು ಮುಲಾಜಿಲ್ಲದೆ ಮಟ್ಟ ಹಾಕಿ : ಸುದೀಪ್ ಕುಮಾರ್
ಬಂಟ್ವಾಳ (ಕರಾವಳಿ ಟೈಮ್ಸ್) : ವಿಟ್ಲ ಸಮೀಪದ ಕಾಡುಮಠ ಶಾಲಾ ಮೈದಾನದಲ್ಲಿ ಭಜರಂಗದಳ ಮುಖಂಡ ಅಪ್ರಾಪ್ತ ಬಾಲಕನ ಮೇಲೆ ನಡೆಸಿದ ಹಲ್ಲೆ, ಅವ್ಯಾಚ್ಯ ಶಬ್ದಗಳ ನಿಂದನೆ ಹಾಗೂ ನೈತಿಕ ಪೊಲೀಸ್ ಗಿರಿ ಕೃತ್ಯ ಅತ್ಯಂತ ಖಂಡಿನೀಯ ಎಂದು ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ ಮಾಣಿ ಹೇಳಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು ಶಾಂತಿ, ಸಮಾಧಾನ ಬಯಸುವ ಸಮಾಜದಲ್ಲಿ ಕಾಡುಮಠ ಶಾಲಾ ಮೈದಾನದಲ್ಲಿ ನಡೆದ ಕೃತ್ಯ ಸಹಿಸಲು ಅಸಾಧ್ಯ. ಸಮಾಜದ ಶಾಂತಿ ಕದಡುವ ರೀತಿಯಲ್ಲಿ ವರ್ತಿಸಿದ ಆರೋಪಿಗೆ ತಕ್ಕ ಶಿಕ್ಷೆಯಾಗಲೇಬೇಕು ಎಂದು ಆಗ್ರಹಿಸಿದ ಸುದೀಪ್ ಕುಮಾರ್ ಶೆಟ್ಟಿ ಅಪ್ರಾಪ್ತ ಬಾಲಕನಿಂದ ಏನಾದರೂ ತಪ್ಪು ಕಂಡು ಬಂದಿದ್ದರೆ ಅದನ್ನು ಕಾನೂನು ಚೌಕಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಅದು ಬಿಟ್ಟು ನೈತಿಕ ಗೂಂಡಾಗಿರಿ ನಡೆಸುವುದು ಸರಿಯಲ್ಲ. ಸಮಾಜದಲ್ಲಿ ನೈತಿಕ ಪೊಲೀಸ್‍ಗಿರಿ ಮೆರೆದು ಶಾಂತಿ-ಸೌಹಾರ್ದತೆ ಕೆಡಿಸಲು ಯತ್ನಿಸುವ ದುಷ್ಕರ್ಮಿಗಳ ವಿರುದ್ದ ಕಠಿಣ ಕ್ರಮ ಜರುಗಬೇಕು ಎಂದವರು ಆಗ್ರಹಿಸಿದ್ದಾರೆ.
0 comments:
Post a Comment