ಬಂಟ್ವಾಳ (ಕರಾವಳಿ ಟೈಮ್ಸ್) : ಕಲ್ಲಡ್ಕದ ಯುವಕ ನಿಶಾಂತ್ ಭಾನುವಾರ ನೇತ್ರಾವತಿಗೆ ಹಾರಿದ್ದ ಸಂದರ್ಭ ಅವರ ರಕ್ಷಣೆಗಾಗಿ ತಮ್ಮ ಪ್ರಾಣದ ಹಂಗು ತೊರೆದು ನದಿಗೆ ಧುಮುಕಿ ಜೀವ ಉಳಿಸಲು ಎಲ್ಲ ರೀತಿಯ ಪ್ರಯತ್ನ ನಡೆಸಿದ ಗೂಡಿನ ಬಳಿ ಹಾಗೂ ಅಕ್ಕರಂಗಡಿ ಯುವಕರಿಗೆ ಎಸ್ಕೆಎಸ್ಸೆಸ್ಸೆಫ್ ಜಿಲ್ಲಾ ಸಮಿತಿ ವತಿಯಿಂದ ಸೋಮವಾರ ಗೂಡಿನಬಳಿ ಎಸ್ಕೆಎಸ್ಸೆಸ್ಸೆಫ್ ಶಾಖಾ ಕಛೇರಿಯಲ್ಲಿ ಗೌರವಿಸಿ ಸನ್ಮಾನಿಸಲಾಯಿತು.
ಈ ಸಂದರ್ಭ ಎಸ್ಕೆಎಸ್ಸೆಸ್ಸೆಫ್ ಜಿಲ್ಲಾಧ್ಯಕ್ಷ ಸಯ್ಯಿದ್ ಅಮೀರ್ ತಂಙಳ್ ಕಿನ್ಯ, ಉಪಾಧ್ಯಕ್ಷರುಗಳಾದ ಸಿದ್ದೀಕ್ ಅಬ್ದುಲ್ ಖಾದರ್, ಅಬೂಸ್ವಾಲಿಹ್ ಫೈಝಿ, ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಯಮಾನಿ, ಕಾರ್ಯದರ್ಶಿ ಇಕ್ಬಾಲ್ ಬಾಳಿಲ, ವರ್ಕಿಂಗ್ ಸೆಕ್ರಟರಿ ಆರಿಫ್ ಬಡಕಬೈಲು, ಸಂಘಟನಾ ಕಾರ್ಯದರ್ಶಿ ರಿಯಾಝ್ ರಹ್ಮಾನಿ, ಸದಸ್ಯರುಗಳಾದ ಅಝೀಝ್ ಮಲಿಕ್ ಮೂಡಬಿದ್ರೆ, ಜಾಬಿರ್ ಫೈಝಿ ಪುತ್ತೂರು, ಶರೀಫ್ ಕೆಲಿಂಜ, ಎಸ್ಕೆಎಸ್ಸೆಸ್ಸೆಫ್ ಗೂಡಿನಬಳಿ ಶಾಖಾಧ್ಯಕ್ಷ ಲತೀಫ್ ಖಾನ್ ಗೂಡಿನಬಳಿ, ಗೂಡಿನಬಳಿ ಶಾಖೆಯ ಸರ್ವ ಸದಸ್ಯರು ಹಾಗೂ ಊರ ನಾಗರಿಕರು ಉಪಸ್ಥಿತರಿದ್ದರು.
0 comments:
Post a Comment