ರಿಯಾದ್ (ಕರಾವಳಿ ಟೈಮ್ಸ್) : ಇಸ್ಲಾಂ ಸ್ವೀಕರಿಸಿಲ್ಲ ಎಂಬ ಕಾರಣಕ್ಕೆ ಮುಸ್ಲಿಮೇತರನನ್ನು ನಿಂದಿಸಿದ್ದ ಸೌದಿ ಮೂಲದ ವ್ಯಕ್ತಿಯನ್ನು ಸೌದಿ ಅರೇಬಿಯಾದಲ್ಲಿ ಬಂಧಿಸಲಾಗಿದೆ.
ಏಷ್ಯಾ ಮೂಲದ ಮುಸ್ಲಿಮೇತರ ವ್ಯಕ್ತಿಯನ್ನು ಸೌದಿ ಅರೇಬಿಯಾ ಮೂಲದ ವ್ಯಕ್ತಿ ನಿಂದಿಸಿದ್ದ ಬಗ್ಗೆ ವಿಡಿಯೋವೊಂದು ಇತ್ತೀಚೆಗೆ ವೈರಲ್ ಆಗಿತ್ತು. ವಿಡಿಯೋದಲ್ಲಿ ಅರಬ್ ಭಾಷೆಯಲ್ಲಿ ವ್ಯಕ್ತಿಯೋರ್ವ ಇಸ್ಲಾಂ ಮತವನ್ನು ಏಕೆ ಸ್ವೀಕರಿಸಿಲ್ಲ ಎಂದು ಹೇಳಿ ಮುಸ್ಲೀಮೇತರ ವ್ಯಕ್ತಿಯನ್ನು ನಿಂದಿಸುತ್ತಿದ್ದ. ಈ ವಿಡಿಯೋಗೆ ಭಾರಿ ವಿರೋಧ ಕೂಡ ವ್ಯಕ್ತವಾಗಿತ್ತು. ಇದೀಗ ಸೌದಿ ಅರೇಬಿಯಾ ಆಡಳಿತ ಮುಸ್ಲೀಮೇತರ ವ್ಯಕ್ತಿಯನ್ನು ನಿಂದಿಸಿದ್ದಾತನನ್ನು ಬಂಧಿಸುವಂತೆ ಆದೇಶ ನೀಡಿತ್ತು. ಅದರಂತೆ ಇಂದು ಪೆÇಲೀಸರು ಆತನನ್ನು ಬಂಧಿಸಿದ್ದಾರೆ.
ಮುಸ್ಲಿಮರ ಪವಿತ್ರ ರಂಝಾನ್ ಆಚರಣೆ ನಡೆಯುತ್ತಿರುವ ಈ ಹೊತ್ತಿನಲ್ಲೇ ಈ ಘಟನೆ ನಡೆದಿರುವುದು ಸೌದಿ ಸರಕಾರಕ್ಕೆ ಅದು ಮುಜುಗರವನ್ನೂ ಉಂಟು ಮಾಡಿತ್ತು.
0 comments:
Post a Comment