ಮಂಗಳೂರು (ಕರಾವಳಿ ಟೈಮ್ಸ್) : ಎಸ್ಸೆಸ್ಸೆಫ್ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ವತಿಯಿಂದ ಉಳ್ಳಾಲ ಡಿವಿಷನ್ ಬ್ಲಡ್ ಸೈಬೋ ಟೀಮ್ ಸಹಕಾರದೊಂದಿಗೆ ದೇರಳಕಟ್ಟೆ ಯೆನಪೆÇೀಯ ಆಸ್ಪತ್ರೆಯಲ್ಲಿ ದಾಖಲಾಗಿರುವ ಎಲ್ಲಾ ರೋಗಿಗಳಿಗೆ ಈದ್ ಫುಡ್ ವಿತರಿಸಲಾಯಿತು.
ಜಿಲ್ಲಾಧ್ಯಕ್ಷ ಇಬ್ರಾಹಿಂ ಸಖಾಫಿ ಸೆರ್ಕಳ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಬ್ಲಡ್ ಸೈಬೋ ಚೆಯರ್‍ಮ್ಯಾನ್ ತೌಸೀಫ್ ಸಅದಿ ಮಾತನಾಡಿದರು. ದ.ಕ. ಜಿಲ್ಲಾ ಕೋಶಾಧಿಕಾರಿ ಮುಹಮ್ಮದ್ ಅಲಿ ತುರ್ಕಳಿಕೆ ಬ್ಲಡ್ ಸೈಬೋ ಕಾರ್ಯಾಚರಣೆಯ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ 600ಕ್ಕಿಂತಲೂ ಅಧಿಕ ರೋಗಿಗಳಿಗೆ ಫುಡ್ ವಿತರಿಸಲಾಯಿತು. ಈ ಸಂದರ್ಭ ಜಿಲ್ಲಾ ಕಾರ್ಯದರ್ಶಿ ಶರೀಫ್ ನಂದಾವರ, ಕ್ಯಾಂಪಸ್ ಕಾರ್ಯದರ್ಶಿ ಎಂ. ಶರೀಫ್ ಬೆರ್ಕಳ, ಸಯ್ಯಿದ್ ಖುಬೈಬ್ ತಂಙಳ್, ಜಿಲ್ಲಾ ಬ್ಲಡ್ ಸೈಬೋ ಉಸ್ತುವಾರಿ ಕರೀಂ ಕದ್ಕಾರ್, ಸದಸ್ಯರಾದ ನವಾಝ್ ಸಖಾಫಿ, ಹಕೀಂ ಕಳಂಜಿಬೈಲ್, ಸುಹೈಲ್ ಮಂಗಳೂರು, ದೇರಳಕಟ್ಟೆ ಸೆಕ್ಟರ್ ಕಾರ್ಯಕರ್ತರು ಉಪಸ್ಥಿತರಿದ್ದರು, ಉಳ್ಳಾಲ ಡಿವಿಷನ್ ಬ್ಲಡ್ ಸೈಬೋ ಕನ್ವೀನರ್ ಅಲ್ತಾಫ್ ಶಾಂತಿಬಾಗ್ ಸಹಕರಿಸಿದರು. ಜಿಲ್ಲಾ ಸದಸ್ಯ ಮುನೀರ್ ಸಖಾಫಿ ವಂದಿಸಿದರು.
0 comments:
Post a Comment