ಬಂಟ್ವಾಳ (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕಲಡ್ಕ ನಿವಾಸಿ ನಿಶಾಂತ್ ಎಂಬ ಯುವಕ ಪಾಣೆಮಂಗಳೂರು ಸೇತುವೆ ಮೇಲಿಂದ ಹಾರಿ ಆತ್ಮಹತ್ಯೆ ಮಾಡುವ ಸಂದರ್ಭ ಹಿಂದೆ ಮುಂದೆ ನೋಡದೆ ನದಿ ನೀರಿಗೆ ಧುಮುಕಿ ಗುರುತು-ಪರಿಚಯ ಇಲ್ಲದ ಹಿಂದು ಹುಡುಗನ ಪ್ರಾಣ ಕಾಪಾಡಲು ಪ್ರಯತ್ನಿಸಿದ ಬಿ.ಮೂಡ ಗ್ರಾಮದ ಗೂಡಿನಬಳಿ ಮುಸ್ಲಿಮ್ ಯುವಕರಿಗೆ ಮನಪೂರ್ವಕ ಅಭಿನಂದನೆ ಸಲ್ಲಿಸುವುದಾಗಿ ಬಂಟ್ವಾಳ ನವಚೇತನ ಟ್ರಸ್ಟ್ ಅಧ್ಯಕ್ಷ ರಾಜಾ ಪಲ್ಲಮಜಲು ತಿಳಿಸಿದ್ದಾರೆ.
ಸಮಯೋಚಿತ ಮಾನವೀಯ ಮುಖ ತೆರೆದಿಟ್ಟು ನಾಗರಿಕ ಸಮಾಜಕ್ಕೆ ಉತ್ತಮ ಸಂದೇಶ ನೀಡಿದ ಈ ತ್ಯಾಗಮಯಿ ಯುವಕರನ್ನು ಸರಕಾರ, ಇಲಾಖೆಗಳು, ಜನಪ್ರತಿನಿಧಿಗಳು ತಕ್ಷಣ ಗುರುತಿಸುವ ಕಾರ್ಯ ಮಾಡಬೇಕು. ಕೋಮುವಾದ ಬೆಂಕಿಯಲ್ಲಿ ಬೇಯುತ್ತಿರುವ ಯುವ ಮನಸ್ಸುಗಳಿಗೆ ಮಾನವೀಯತೆಯ ಗುಣಗಳ ಸಿಂಚನಗೈಯುವ ಇಂತಹ ಮನಸ್ಸುಗಳನ್ನು ಸಮಾಜಕ್ಕೆ ಪರಿಚಯಿಸಿ ಆ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಕಾರ್ಯ ಮಾಡಬೇಕಾಗಿದೆ ಎಂದು ರಾಜಾ ಪಲ್ಲಮಜಲು ಆಗ್ರಹಿಸಿದ್ದಾರೆ.
0 comments:
Post a Comment