ಬೆಂಗಳೂರು (ಕರಾವಳಿ ಟೈಮ್ಸ್) : ಕೇಂದ್ರ ಸರಕಾರ ಜೂನ್ 1 ರಿಂದ ನಿಬಂಧನೆಗಳನುಸಾರ ರೈಲು ಸಂಚಾರಕ್ಕೆ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ವಿವಿಧ ರೈಲುಗಳಿಗೆ ಗುರುವಾರ ಬೆಳಿಗ್ಗೆ 10 ಗಂಟೆಯಿಂದ ಇ ಬುಕ್ಕಿಂಗ್ ಆರಂಭವಾಗಿದೆ.
ಈ ಕುರಿತು ನೈರುತ್ಯ ರೈಲ್ವೆ ಮಾಹಿತಿ ನೀಡಿದ್ದು, ಮುಂಬೈ-ಕೆಎಸ್‍ಆರ್ ಬೆಂಗಳೂರು ಉದ್ಯಾನ್ ಎಕ್ಸಪ್ರೆಸ್, ಮುಂಬೈ-ಗದಗ ಎಕ್ಸ್‍ಪ್ರೆಸ್, ದಾನಪುರ-ಕೆಎಸ್‍ಆರ್ ಬೆಂಗಳೂರು ಸಂಘಮಿತ್ರ ಎಕ್ಸ್‍ಪ್ರೆಸ್ ರೈಲುಗಳಿಗೆ ಪ್ರಯಾಣಿಕರು ಟಿಕೆಟ್ ಕಾಯ್ದಿರಿಸಬಹುದಾಗಿದೆ.
ವಾರಕ್ಕೆ ಎರಡು ಬಾರಿ ಸಂಚರಿಸುವ ನವದೆಹಲಿ-ಯಶವಂತಪುರ ಕರ್ನಾಟಕ ಸಂಪರ್ಕ ಕ್ರಾಂತಿ ಎಕ್ಸ್‍ಪ್ರೆಸ್, ಹುಬ್ಬಳ್ಳಿ-ಬೆಂಗಳೂರು ಜನಶತಾಬ್ದಿ ಎಕ್ಸ್‍ಪ್ರೆಸ್, ಯಶವಂತಪುರ-ಶಿವಮೊಗ್ಗ ಜನಶತಾಬ್ದಿ ಎಕ್ಸ್‍ಪ್ರೆಸ್, ವಾಸ್ಕೋಡಗಾಮ-ಹಜರತ್ ನಿಜಾಮುದ್ದೀನ್ ಗೋವಾ ಎಕ್ಸ್‍ಪ್ರೆಸ್ ಮತ್ತು ಹೌರಾ-ಯಶವಂತಪುರ ಹೌರಾ ದುರಂತೊ ಎಕ್ಸ್‍ಪ್ರೆಸ್ ರೈಲುಗಳು ಕೂಡ ಜೂನ್ 1 ರಿಂದ ಸಂಚರಿಸಲಿವೆ ಎಂದು ಇಲಾಖೆ ಮಾಹಿತಿ ನೀಡಿದೆ.
ಟಿಕೆಟ್ ದರದಲ್ಲಿ ಊಟದ ದರ ಸೇರಿಸಿಲ್ಲ, ಊಟಕ್ಕೆ ಪ್ರತ್ಯೇಕ ಹಣ ನೀಡಬೇಕಿದೆ. ರೈಲಿನಲ್ಲಿ ಕೆಲವು ಆಹಾರ ಮಾರಾಟದ ವ್ಯವಸ್ಥೆ ಇದೆ, ಉಳಿದಂತೆ ರೈಲು ನಿಲ್ದಾಣದಲ್ಲಿರುವ ಅಂಗಡಿಗಳಲ್ಲಿ ಆಹಾರ ಪದಾರ್ಥ ಮಾರಾಟ ಮಾಡಲಾಗುತ್ತದೆ. ಜೂನ್ 1 ರಿಂದ 200 ರೈಲುಗಳು ಮತ್ತು 16 ವಿಶೇಷ ರೈಲುಗಳ ಸಂಚಾರ ಆರಂಭವಾಗಲಿದೆ. ಯಾವುದೇ ರೀತಿಯ ಬ್ಲಾಂಕೆಟ್ ಕೂಡ ನೀಡುವುದಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ.
0 comments:
Post a Comment