ನವದೆಹಲಿ (ಕರಾವಳಿ ಟೈಮ್ಸ್) : ಲಾಕ್‍ಡೌನ್ ಆರ್ಥಿಕ ಸಂಕಷ್ಟಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಸಾಲದ ಮೇಲಿನ ಬಡ್ಡಿ ದರವನ್ನು ಇಳಿಕೆ ಮಾಡುವ ಮೂಲಕ ಜನತೆಗೆ ಕೊಂಚ ನಿರಾಳತೆ ನೀಡಿದೆ.
ಆರ್‌ಬಿಐ ಮುಖ್ಯಸ್ಥ ಶಕ್ತಿಕಾಂತ್ ದಾಸ್ ಶುಕ್ರವಾರ ಬೆಳಿಗ್ಗೆ ಸುದ್ದಿಗೋಷ್ಠಿ ನಡೆಸಿ, ಸಾಲದ ಮೇಲಿನ ಕಂತು ಕುಟ್ಟುವ ಅವಧಿ ಮತ್ತೆ ಮೂರು ತಿಂಗಳ ಕಾಲ ವಿಸ್ತರಣೆ ಮಾಡಿರುವುದಾಗಿ ಘೋಷಿಸಿದ್ದಾರೆ. ಎಲ್ಲಾ ರೀತಿಯ ಸಾಲದ ಇಎಂಐ ಕಟ್ಟಲು ಆಗಸ್ಟ್ 31ರವರೆಗೂ ಅವಧಿಯನ್ನು ವಿಸ್ತರಣೆ ಮಾಡಿದೆ ಎಂದರು.
ಆರ್‌ಬಿಐ ರೆಪೋ ದರ 40 ಬೇಸಿಸ್ ಅಂಕದಷ್ಟು ಕಡಿತ ಮಾಡಿದೆ. ಈ ಮೂಲಕ ಶೇ. 4.4ರಿಂದ ಶೇ.4ಕ್ಕೆ ಇಳಿಕೆಯಾಗಿದೆ. ಗೃಹ ಸಾಲ, ವಾಹನ ಸಾಲ, ವೈಯಕ್ತಿಕ ಸಾಲದ ಮೇಲಿನ ಬಡ್ಡಿ ಇಳಿಕೆ ಮಾಡಿದೆ. ರಿವರ್ಸ್ ರೆಪೋ ದರ ಶೇ.3.35ಕ್ಕೆ ಇಳಿಕೆ ಮಾಡಿದೆ. ರಿವರ್ಸ್ ರೆಪೋ ದರ ಶೇ. 3.35 ಇಳಿಕೆಯಿಂದ ಬ್ಯಾಂಕುಗಳಿಗೆ ಪ್ರಯೋಜನವಾಗಲಿದೆ.
ಅಷ್ಟೇ ಅಲ್ಲದೇ ಆರ್‌ಬಿಐ ಮತ್ತಷ್ಟು ಹಣಕಾಸು ನೆರವು ನೀಡಿದೆ. ಇನ್ನೂ ಮೂರು ತಿಂಗಳು ಎಸ್‍ಬಿಐ ಸೇರಿ ಅನೇಕ ಸಂಸ್ಥೆಗಳಿಗೆ ನೆರವು ಘೋಷಿಸಿದೆ.
ಕೇಂದ್ರ ಸರ್ಕಾರವು 20 ಲಕ್ಷ ಕೋಟಿ ರೂಪಾಯಿ ಮೊತ್ತದ ಆರ್ಥಿಕ ಪ್ಯಾಕೇಜ್ ಫೋಷಿಸಿದ ನಂತರ ಇದೇ ಮೊದಲ ಬಾರಿಗೆ ಆರ್‌ಬಿಐ ಗವರ್ನರ್ ಸುದ್ದಿಗೋಷ್ಠಿ ನಡೆಸಿದ್ದಾರೆ.
0 comments:
Post a Comment