ಮೃತ ಮುಬಾರಕ್ |
ಬಂಟ್ವಾಳ (ಕರಾವಳಿ ಟೈಮ್ಸ್) : ತಾಲೂಕಿನ ಪುದು ಗ್ರಾಮದ, ಫರಂಗಿಪೇಟೆ ಸಮೀಪದ ಮಾರಿಪಳ್ಳ-ಪೇರಿಮಾರ್ ಎಂಬಲ್ಲಿನ ಮೌಲಾ ಮಸೀದಿಯಲ್ಲಿ ಶನಿವಾರ ಸಂಜೆ ಕೆಲಸ ನಿರ್ವಹಿಸುತ್ತಿದ್ದ ವೇಳೆ ಅಮೆಮಾರ್ ನಿವಾಸಿ ರಫೀಕ್ ಎಂಬವರ ಪುತ್ರ, ಇಲೆಕ್ಟ್ರಿಷಿಯನ್ ಮುಬಾರಕ್ ಯಾನೆ ಮುಬ್ಬ (23) ಎಂಬವರು ಮೃತಪಟ್ಟಿದ್ದು, ಮತ್ತೋರ್ವ ಫಾರೂಕ್ ಎಂಬವರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಇಲ್ಲಿನ ಜಲಾಲಿಯಾ ನಗರದ ಮೌಲಾ ಮಸೀದಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ವೇಳೆ ನೆಲದಲ್ಲಿ ಬಿದ್ದಿದ್ದ ವಿದ್ಯುತ್ ತಂತಿ ಗಮನಿಸದೆ ಅದನ್ನು ಸ್ಪರ್ಶಿಸಿದ ಪರಿಣಾಮ ವಿದ್ಯುತ್ ಪ್ರವಹಿಸಿ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.
0 comments:
Post a Comment