ನವದೆಹಲಿ (ಕರಾವಳಿ ಟೈಮ್ಸ್) : ಲಾಕ್‍ಡೌನ್ ಬಿಗ್ ರಿಲೀಫ್ ಸಿಕ್ಕಿದ ಬೆನ್ನಲ್ಲೇ ಕೇಂದ್ರ ಸರಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಅಬಕಾರಿ ಸುಂಕ ಹೆಚ್ಚಳ ಮಾಡಿ ಆರ್ಥಿಕತೆಗೆ ಆದಾಯ ತುಂಬಿಸುವ ಸಾಹಸಕ್ಕಿಳಿದಿದೆ.
1 ಲೀಟರ್ ಪೆಟ್ರೋಲ್ ಮೇಲೆ 8 ರೂಪಾಯಿ ರಸ್ತೆ ಮತ್ತು ಮೂಲಸೌಕರ್ಯ ಸೆಸ್, 2 ರೂಪಾಯಿ ವಿಶೇಷ ಅಬಕಾರಿ ಸುಂಕ ಹೇರಿದೆ. ಪತಿ ಲೀಟರ್ ಡೀಸೆಲ್ ಮೇಲೆ 8 ರೂಪಾಯಿ ರಸ್ತೆ ಮತ್ತು ಮೂಲ ಸೌಕರ್ಯ ಸೆಸ್ ಹೇರಿದರೆ, 5 ರೂಪಾಯಿ ವಿಶೇಷ ಅಬಕಾರಿ ಸುಂಕ ಹೇರಲಾಗಿದೆ. ಪರಿಷ್ಕೃತ ಪೆಟ್ರೋಲ್, ಡೀಸೆಲ್ ದರ ಮಂಗಳವಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿದೆ. ಅಬಕಾರಿ ಸುಂಕ ಏರಿಕೆಯಾದರೂ ಗ್ರಾಹಕರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.
ದೆಹಲಿ ಸರ್ಕಾರದಿಂದ ಏರಿಕೆ
ದೆಹಲಿ ಸರಕಾರ ಪೆಟ್ರೋಲ್ ಮೇಲೆ ಶೇ. 27 ಮತ್ತು ಡೀಸೆಲ್ ಮೇಲೆ ಶೇ. 16.75 ವ್ಯಾಟ್ ನಿಗದಿ ಮಾಡಿತ್ತು. ಆದರೆ ಈಗ ಪಟ್ರೋಲ್ ಮೇಲೆ ಶೇ. 30, ಡೀಸೆಲ್ ಮೇಲೆ ಶೇ. 30ರಷ್ಟು ವ್ಯಾಟ್ ಏರಿಕೆ ಮಾಡಲಾಗಿದೆ.
ವ್ಯಾಟ್ ಏರಿಕೆಯಿಂದಾಗಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 1.67 ರೂಪಾಯಿ, ಡೀಸೆಲ್ ಬೆಲೆ 7.10 ರೂಪಾಯಿ ಏರಿಕೆಯಾಗಿದೆ. ಪರಿಣಾಮ ದೆಹಲಿಯಲ್ಲಿ ಈಗ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 71.26 ರೂಪಾಯಿ (ಹಿಂದಿನ ದರ 69.59) ಏರಿಕೆಯಾಗಿದ್ದರೆ ಪ್ರತಿ ಲೀಟರ್ ಡೀಸೆಲ್ ದರ 69.59 ರೂಪಾಯಿ (62.29 ರೂ.) ಏರಿಕೆಯಾಗಿದೆ.
0 comments:
Post a Comment